ETV Bharat / state

ಬೆಂಗಳೂರು: ಸ್ನೇಹಿತನೊಂದಿಗೆ ಪಬ್‌ಗೆ ತೆರಳಿದ್ದ ಯುವತಿಗೆ ಬ್ಯಾಡ್ ಟಚ್, ಎಫ್ಐಆರ್ ದಾಖಲು - BAD TOUCH TO YOUNG WOMAN

ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪಬ್‌ಗೆ ತೆರಳಿದ್ದ ಯುವತಿಗೆ ಅಪರಿಚಿತನೊಬ್ಬ ಬ್ಯಾಡ್‌ ಟಚ್‌ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಎಫ್​ಐಆರ್​ ದಾಖಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jan 1, 2025, 3:04 PM IST

ಬೆಂಗಳೂರು: ಹೊಸ ವರ್ಷಾಚರಣೆಗೆ ಸ್ನೇಹಿತನೊಂದಿಗೆ ಪಬ್‌ಗೆ ತೆರಳಿದ್ದ ಯುವತಿಯನ್ನು ಅಪರಿಚಿತನೋರ್ವ ಅಸಭ್ಯವಾಗಿ ಸ್ಪರ್ಶಿಸಿರುವ ಆರೋಪ ಕೇಳಿಬಂದಿದೆ. ತಡರಾತ್ರಿ ಕಾಡುಬೀಸನಹಳ್ಳಿಯ ಪಬ್‌ನಲ್ಲಿ ಘಟನೆ ನಡೆದಿದ್ದು, ಮಾರತ್​ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತನೊಂದಿಗೆ ರಾತ್ರಿ ಪಬ್‌ಗೆ ಬಂದಿದ್ದ ಯುವತಿಯನ್ನ‌ ಅಪರಿಚಿತನೋರ್ವ ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎನ್ನಲಾಗಿದೆ‌. ಈ ವೇಳೆ, ಸ್ಥಳದಲ್ಲೇ ಯುವತಿ ಕಿರುಚಿಕೊಂಡ ಪ್ರತಿರೋಧವೊಡ್ಡಿದ್ದಾರೆ. ಅಷ್ಟರಲ್ಲಾಗಲೇ ಸ್ಥಳದಿಂದ ಆರೋಪಿ ಕಾಲ್ಕಿತ್ತಿದ್ದಾನೆ. ಸೂಕ್ತ ಭದ್ರತೆ ಒದಗಿಸದ ಪಬ್ ಸಿಬ್ಬಂದಿ ವಿರುದ್ಧ ಯುವತಿ ಮತ್ತು ಆಕೆಯ ಸ್ನೇಹಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪಬ್‌ನ ಸಿಸಿಟಿವಿ ದೃಶ್ಯಗಳನ್ನ ಸಂಗ್ರಹಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌.

ಇದನ್ನೂ ಓದಿ: 2024 ಕ್ಕೆ ಬೈ ಬೈ ; ಹೊಸ ವರ್ಷದ ಸಂಭ್ರಮದಲ್ಲಿ ವಾಣಿಜ್ಯ ನಗರಿ ಮಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.