ನವದೆಹಲಿ: ಯೆಮೆನ್ ನಾಗರಿಕನ ಕೊಂದು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ಪಲಕ್ಕಾಡ್ ಮೂಲಕ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಉಳಿವಿಗೆ ಭಾರತವು ಎಲ್ಲಾ ಸಹಾಯ ಮಾಡುವುದಾಗಿ ತಿಳಿಸಿದೆ.
ಈ ನಡುವೆ ದೆಹಲಿ ಹೈಕೋರ್ಟ್ ಪ್ರಿಯಾ ರಕ್ಷಿಸಲು ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ಕುರಿತು ಸೂಚನೆಗಳನ್ನು ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ತಿಳಿಸಿದೆ. ಈ ಕುರಿತು ಮಂಗಳವಾರ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಅರ್ಜಿಯನ್ನು ಪಟ್ಟಿ ಮಾಡಿದರು.
ಹತ್ಯೆಗೀಡಾದ ಯೆಮೆನ್ ವ್ಯಕ್ತಿಯ ಕುಟುಂಬದೊಂದಿಗೆ ಸಂಧಾನ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಶನಲ್ ಆ್ಯಕ್ಷನ್ ಕೌನ್ಸಿಲ್ ಎಂಬ ಸಂಘಟನೆಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು. ಈ ವೇಳೆ ಬ್ಲಡ್ ಮನಿ (ಸಾವಿಗೆ ಹಣದ ರೂಪದಲ್ಲಿ ಕುಟುಂಬಕ್ಕೆ ನೀಡುವ ಪರಿಹಾರ) ಪಾವತಿ ಮಾಡುವ ಮೂಲಕ ಪ್ರಿಯಾ ಅವರನ್ನು ರಕ್ಷಿಸಬಹುದು ಎಂದು ಕೂಡ ತಿಳಿಸಲಾಗಿದೆ.
ಈ ವೇಳೆ ನ್ಯಾಯಾಲಯದ ಮುಂದೆ ಸಾವನ್ನಪ್ಪಿದ ಮಂದಿ ಪ್ರಿಯಾ ಅವರನ್ನು ಮದುವೆ ಆಗಿರುವುದಾಗಿ ನಕಲಿ ದಾಖಲೆಯನ್ನು ನೀಡಿರುವುದಾಗಿ ಆರೋಪಿಸಿದರು. ಅಲ್ಲದೆ ಆತ ಆಕೆಗೆ ಕಿರುಕುಳ ನೀಡಿ, ದೌರ್ಜನ್ಯ ಎಸಗಿರುವುದು ಕಂಡು ಬಂದಿದೆ. ಆಕೆಯ ಮರಣದಂಡನೆಯ ಮನವಿಯನ್ನು ತಿರಸ್ಕಾರ ಮಾಡಲಾಗಿದೆ. ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿದೆ. ಬ್ಲಡ್ ಮನಿ ಪಾವತಿಸುವ ಮೂಲಕ ನಿಮಿಷಾ ಅವರ ಜೀವವನ್ನು ಉಳಿಸಲು ಅವಕಾಶವಿದೆ ಎಂದು ಹೇಳಿದರು.
ಇನ್ನು ಪ್ರಿಯಾ ಅವರ 11 ವರ್ಷದ ಮಗಳು ಅನಾಥಾಶ್ರಮದಲ್ಲಿದ್ದು, ಆಕೆಯ ತಾಯಿ ಕೇರಳದಲ್ಲಿ ಮನೆಗೆಲಸ ಮಾಡುತ್ತಿದ್ದು, ಗಂಡ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಕುಟುಂಬವೂ ಸಹ ಸದ್ಯ ನಡೆಯುತ್ತಿರುವ ಕಾನೂನು ಪ್ರಕ್ರಿಯೆಯಿಂದಾಗಿ ಗಂಭೀರವಾದ ಸವಾಲನ್ನು ಎದುರುರಿಸುತ್ತಿದೆ ಎಂದರು.
ಈ ಕುರಿತು ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿರುವ ನಿಮಿಷಾ ತಾಯಿ ಪರ ವಕೀಲ ಸುಭಾಷ್ ಚಂದ್ರನ್, ಯೆಮೆನ್ನಲ್ಲಿ ಶರಿಯಾ ಕಾನೂನು ಇದ್ದು, ಅಲ್ಲಿಯ ಕಾನೂನಿನಲ್ಲಿ ಬ್ಲಡ್ ಮನಿಗೆ ಅವಕಾಶವಿದೆ. ಸಾವನ್ನಪ್ಪಿದ ಮಂದಿ ಕುಟುಂಬಸ್ಥರು ಬ್ಲಡ್ ಮನಿಗೆ ಒಪ್ಪಿದರೆ ಪ್ರಿಯಾ ಬಿಡುಗಡೆ ಸಾಧ್ಯವಾಗಬಹುದು ಎಂದಿದ್ದಾರೆ.
ಇತ್ತ ಕೋರ್ಟ್ ಕೂಡ ಮೃತರ ಕುಟುಂಬದೊಂದಿಗೆ ಮಾತುಕತೆ ನಡೆಸುವ ಮೂಲಕ ಯೆಮೆನ್ ಕಾನೂನುಗಳಿಗೆ ಅನುಸಾರವಾಗಿ ಪ್ರಿಯಾಳ ಜೀವವನ್ನು ಉಳಿಸಲು ಅಗತ್ಯ ಕ್ರಮಗಳನ್ನು ತಕ್ಷಣ ಪ್ರಾರಂಭಿಸಲು ಸೂಚಿಸಿದೆ.
ಯೆಮೆನ್ ಅಧ್ಯಕ್ಷ ರಶದ್ ಅಲ್ ಅಲಿಮಿ ಮರಣ ದಂಡನೆ ಘೋಷಿಸಿದ್ದರು. ಪ್ರಿಯಾರನ್ನು ನೇಣುಗಂಬಕ್ಕೆ ಇನ್ನೂ ಏರಿಸದ ಕಾರಣ ಅವರ ಜೀವ ಉಳಿಸುವ ಸಾಧ್ಯತೆ ಈಗಲೂ ಇದೆ. ಆದರೆ, ಇದಕ್ಕೆ ಕುಟುಂಬಸ್ಥರು ಬ್ಲಡ್ ಮನಿಗೆ ಒಪ್ಪಿಗೆ ನೀಡಬೇಕು. ಅವರು ಒಪ್ಪಿಗೆ ನೀಡಿದಲ್ಲಿ ಮರಣದಂಡನೆ ತಪ್ಪಲಿದೆ. ಒಪ್ಪಿಗೆ ನೀಡದಿದ್ದಲಿ ಪ್ರಿಯಾ ಶಿಕ್ಷೆ ಎದುರಿಸಬೇಕಿದೆ.
ಇದನ್ನೂ ಓದಿ: ಯೆಮೆನ್ನಲ್ಲಿ ಭಾರತೀಯ ನರ್ಸ್ ಪ್ರಿಯಾಗೆ ಮರಣದಂಡನೆ: ಸಹಾಯದ ಭರವಸೆ ನೀಡಿದ ವಿದೇಶಾಂಗ ಸಚಿವಾಲಯ