Watch... ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಬೆನ್ನಿ ದಯಾಳ್ ತಲೆಗೆ ತಗುಲಿದ ಡ್ರೋನ್... - Etv Bharat Kannada
🎬 Watch Now: Feature Video
ಚೆನ್ನೈ: 'ಬಡ್ತಮೀಜ್ ದಿಲ್' ಹಾಡಿನ ಖ್ಯಾತ ಗಾಯಕ ಬೆನ್ನಿ ದಯಾಳ್ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದ ವೇಳೆ ಡ್ರೋನ್ ಅವರ ತಲೆಗೆ ತಾಕಿ ಗಾಯಗೊಂಡಿರುವ ಘಟನೆ ನಡೆದಿದೆ. ಮೂಲಗಳ ಪ್ರಕಾರ ನಿನ್ನೆ ಇಲ್ಲಿಯ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವೇದಿಕೆ ಮೇಲೆ ಗಾಯಕ ಬೆನ್ನಿ ದಯಾಳ್ ನೆರೆದಿದ್ದ ಜನರನ್ನು ರಂಜಿಸುತ್ತ ಊರ್ವಸಿ ಊರ್ವಸಿ ಎಂಬ ಹಾಡನ್ನು ಹಾಡುತ್ತಿದ್ದರು. ಇನ್ನು ಅವರ ಗಾಯನದ ದೃಶ್ಯವನ್ನು ಡ್ರೋನ್ ಮೂಲಕ ಸೆರೆ ಹಿಡಿಯಲಾಗುತ್ತಿತ್ತು. ಅವರ ಹಿಂಭಾಗದಿಂದ ಡ್ರೋನ್ ಮೂಲಕ ದೃಶ್ಯ ಸೆರೆ ಹಿಡಿಯಲು ಮುಂದಾದಾಗ ಡ್ರೋನ್ ಅವರ ತಲೆ ಮತ್ತು ಕೈಗೆ ತಗುಲಿದೆ. ತಕ್ಷಣವೇ ಮೈಕ್ ಸಮೇತ ಗಾಯಕ ನೆಲಕ್ಕೆ ಬಿದ್ದಿದ್ದಾರೆ. ಡ್ರೋನ್ ತಾಗಿದ ಪರಿಣಾಮ ದಯಾಳ್ ಅವರ ತಲೆ ಮತ್ತು ಬೆರಳಿಗೆ ಗಾಯಗಳಾಗಿವೆ. ಇನ್ನ ಅವರ ತಲೆಗೆ ಡ್ರೋನ್ ತಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಕುರಿತು ಬೆನ್ನಿ ದಯಾಳ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ಕಾರ್ಯಕ್ರಮದ ವೇಳೆ ಡ್ರೋನ್ ಬಡಿದು, ನನ್ನ ತಲೆ ಭಾಗಕ್ಕೆ ಮತ್ತು ಕೈ ಬೆರಳಿಗೆ ಗಾಯಗಳಾಗಿವೆ. ಆದಷ್ಟು ಬೇಗ ಇದರಿಂದ ಚೇತರಿಸಿಕೊಳ್ಳುವೆ. ಅಲ್ಲದೇ ನನ್ನ ಆರೋಗ್ಯದ ಬಗ್ಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಇಂತಹ ಕಾರ್ಯಕ್ರಮಗಳಲ್ಲಿ ಡ್ರೋನ್ ಬಗ್ಗೆ ಸಂಪೂರ್ಣ ತಿಳಿದಿರುವ ವೃತ್ತಿಪರ ಆಪರೇಟರ್ಗಳನ್ನು ಕರೆಯಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಅಲ್ಲದೇ ನಾವು ಗಾಯಕರು ನಮಗೆ ಸ್ಟಾರ್ ನಟರಿಗೆ ಮಾಡುವಂತಹ ವ್ಯವಸ್ಥೆಗಳ ಅಗತ್ಯವಿಲ್ಲ, ಸರಳವಾದ ವ್ಯವಸ್ಥೆಯನ್ನು ಮಾಡಬೇಕೆಂದು ಆಯೋಜಕರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: 'ಕಾಂತಾರ 2 ಕೆಲಸ ಶುರು, ಮಾರ್ಚ್ನಿಂದ ಫೋನ್ ಆಫ್': ಫಾಲ್ಕೆ ಪ್ರಶಸ್ತಿ ಬಗ್ಗೆ ರಿಷಬ್ ಶೆಟ್ಟಿ ಹೀಗಂದ್ರು!