ಸಿದ್ದರಾಮಯ್ಯ ದೀರ್ಘ ಕಾಲ ಸಿಎಂ ಸ್ಥಾನದಲ್ಲಿರಲಿ ಎಂದು ಅಭಿಮಾನಿಯಿಂದ 2 ಕಿ.ಮೀ​ ದೀಡ್​ ನಮಸ್ಕಾರ..

By

Published : May 21, 2023, 10:32 PM IST

thumbnail

ಹಾವೇರಿ : ಸಿದ್ದರಾಮಯ್ಯ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಅವರ ಅಭಿಮಾನಿಯೊಬ್ಬರು ಸುಮಾರು ಎರಡು ಕಿಲೋ ಮೀಟರ್ ದೀಡ್​ನಮಸ್ಕಾರ ಹಾಕಿದ್ದಾರೆ. ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳ ಗ್ರಾಮದ ನಾಗೇಂದ್ರಪ್ಪ ಕಚ್ಚರಬಿ ಎಂಬ ಅಭಿಮಾನಿ ಈ ರೀತಿ ದೀಡ ನಮಸ್ಕಾರ ಹಾಕಿರುವ ಅಭಿಮಾನಿ. ಗ್ರಾಮದ ಪ್ರಮುಖ ವೃತ್ತದಿಂದ ಶ್ರೀಮಂಜುನಾಥ್ ದೇವಸ್ಥಾನದವರೆಗೆ ನಾಗೇಂದ್ರಪ್ಪ ದೀಡ್​ ನಮಸ್ಕಾರ ಹಾಕುವ ಮೂಲಕ ಸಿದ್ದ ಅಭಿಮಾನ ಮೆರೆದಿದ್ದಾನೆ.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಬೃಹತ್ ಬ್ಯಾನರ್ ಹಿಡಿದು ಮೆರವಣಿಗೆ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳು ಸಿಎಂ ಸಿದ್ದರಾಮಯ್ಯಗೆ ಜಯಘೋಷ ಹಾಕಿದ್ದಾರೆ. ನಾಗೇಂದ್ರಪ್ಪ ಮೊದಲಿನಿಂದಲೂ ಸಿದ್ದರಾಮಯ್ಯ ಕಟ್ಟಾ ಅಭಿಮಾನಿಯಾಗಿದ್ದು, ಈ ಹಿಂದೆಯೂ ಸಿದ್ದರಾಮಯ್ಯ ಸಿಎಂ ಆದಾಗ ಸಹ ನಾಗೇಂದ್ರಪ್ಪ ದೀಡ್​ ನಮಸ್ಕಾರ ಹಾಕಿದ್ದರು. ಇದೀಗ ಮತ್ತೆ ದೀಡ್ ​ನಮಸ್ಕಾರ ಹಾಕಿದ್ದಾರೆ. ಸಿದ್ದರಾಮಯ್ಯ ದೀರ್ಘ ಕಾಲ ಸಿಎಂ ಹುದ್ದೆಯಲ್ಲಿರುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ ಎಂದು ನಾಗೇಂದ್ರಪ್ಪನ ಸಂಬಂಧಿಕರು ತಿಳಿಸಿದ್ದಾರೆ.       

ಇದನ್ನೂ ಓದಿ : ಶ್ರೀ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ದರ್ಶನ ಪಡೆದ ನೂತನ ಡಿಸಿಎಂ ಡಿ. ಕೆ. ಶಿವಕುಮಾರ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.