ಜೀವನೋಪಾಯಕ್ಕೆ ಇಟ್ಟುಕೊಂಡಿದ್ದ ಬಟ್ಟೆ ಅಂಗಡಿ ಭಸ್ಮ: ಬೆಸ್ಕಾಂ ಅಧಿಕಾರಿಗಳಿಂದ ನಿರ್ಲಕ್ಷ್ಯ ಆರೋಪ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಬೆಂಗಳೂರು ಗ್ರಾಮಾಂತರ : ಜೀವನಕ್ಕೆ ಆಧಾರವಾಗಿಟ್ಟುಕೊಂಡಿದ್ದ ಬಟ್ಟೆ ಅಂಗಡಿ ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರದ ವಿವಿ ಬಡಾವಣೆಯ ಗಂಗಮ್ಮ ಗುಡಿ ಬಳಿ ನಡೆದಿದೆ. ಅಂದ ಹಾಗೆ ಕಳೆದ ಹಲವು ದಿನಗಳಿಂದ ಅಂಗಡಿ ಮುಂದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ವಾಲಿತ್ತು. ಹೀಗಾಗಿ ಟ್ರಾನ್ಸ್ ಫಾರ್ಮರ್ ಬದಲಾವಣೆ ಮಾಡುವಂತೆ ಸಾಕಷ್ಟು ಭಾರಿ ಅಂಗಡಿ ಮಾಲೀಕ ಜಕ್ಕಣಚಾರಿ ಮನವಿಯನ್ನ ಮಾಡಿದ್ದರು.
ಆದರೆ, ಎಷ್ಟೇ ದೂರು ನೀಡಿದರು ಟ್ರಾನ್ಸ್ ಫಾರ್ಮರ್ ಬದಲಾಯಿಸದೇ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಇಂದು ಬೆಳಗ್ಗೆ ಅಂಗಡಿಗೆ ಟ್ರಾನ್ಸ್ ಫಾರ್ಮರ್ ನಿಂದ ಬಂದ ಕಿಡಿ ಅಂಗಡಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಪರಿಣಾಮ ಅಂಗಡಿ ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಹಾಗೂ ವಸ್ತುಗಳು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಸಂಕಷ್ಟದಲ್ಲಿರುವ ಅಂಗಡಿ ಮಾಲೀಕರು ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಗ್ರೇಟರ್ ನೋಯ್ಡಾದ ಗ್ಯಾಲಕ್ಸಿ ಪ್ಲಾಜಾದಲ್ಲಿ ಅಗ್ನಿ ಅವಘಡ: ಕಟ್ಟಡದ ಮೂರನೇ ಅಂತಸ್ತಿನಿಂದ ಜಿಗಿದ ಇಬ್ಬರು ಸೇಫ್