ಶಿರಸಿ: ಲೋಕಾಯುಕ್ತ ಬಲೆಗೆ ಬಿದ್ದ ಸಬ್ ರಿಜಿಸ್ಟರ್ - ಶಿರಸಿ ಸಬ್ ರಿಜಿಸ್ಟರ್ ಬಂಧನ
🎬 Watch Now: Feature Video
Published : Oct 27, 2023, 7:47 PM IST
ಶಿರಸಿ : ದೇವಸ್ಥಾನದ ಸಮಿತಿಗೆ ದಾನ ನೀಡಿದ ಜಾಗವನ್ನು ನೋಂದಣಿ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ಶಿರಸಿ ಸಬ್ ರಿಜಿಸ್ಟರ್ ಅವರನ್ನು ಕಾರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಸಬ್ ರಿಜಿಸ್ಟರ್ ರಾಧಮ್ಮ ಬಂಧಿತರು. 3 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಶಿರಸಿ ತಾಲೂಕಿನ ದಾಸನಕೊಪ್ಪದ ಬಸವರಾಜ ನಂದಿಕೇಶ್ವರಮಠ ಎಂಬವರು ತಮ್ಮ ಜಾಗವನ್ನು ಜಗಜ್ಯೋತಿ ವೀರಶೈವ ಸಮಿತಿಗೆ ದಾನವಾಗಿ ನೀಡಿದ್ದಾರೆ. ಇದನ್ನು ನೋಂದಣಿ ಮಾಡಲು ಉಪ ನೋಂದಣಾಧಿಕಾರಿ ಲಂಚ ಕೇಳಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಶುಕ್ರವಾರ ಮಧ್ಯಾಹ್ನ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. "ಲಂಚ ಪಡೆದಿದ್ದು ಸಾಬೀತಾಗಿದ್ದು, ಕೈಯಲ್ಲಿ ಹಣವೂ ಬಂದಿದೆ. ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ" ಎಂದು ಲೋಕಾಯುಕ್ತ ಎಸ್ಪಿ ಕುಮಾರ್ ಚಂದ್ರ ಮಾಹಿತಿ ನೀಡಿದರು.
ಇದನ್ನೂ ಓದಿ : ಇ-ಸ್ವತ್ತು ಮಾಡಿಕೊಡಲು ಲಂಚ: ಪಿಡಿಒ, ಡೇಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಬಲೆಗೆ