6 ತಾಸಲ್ಲಿ 300 ಮಿಮೀ! ಗುಜರಾತ್‌ನಲ್ಲಿ ಧಾರಾಕಾರ ಮಳೆ; ಮುಳುಗಿದ ವಾಹನಗಳು- ವಿಡಿಯೋ - waterlogging in Dhoraji

🎬 Watch Now: Feature Video

thumbnail

By

Published : Jul 19, 2023, 7:19 AM IST

ರಾಜ್‌ಕೋಟ್ (ಗುಜರಾತ್): ಉತ್ತರದ ಹಿಮಾಚಲಪ್ರದೇಶ, ದೆಹಲಿಯಲ್ಲಿ ವ್ಯಾಪಕ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇದೀಗ ಗುಜರಾತ್​ನಲ್ಲೂ ವರುಣಾರ್ಭಟ ಜೋರಾಗಿದೆ. ದಕ್ಷಿಣ ಗುಜರಾತ್​ನಲ್ಲಿ ಸುರಿಯುತ್ತಿರುವ ಅಧಿಕ ಮಳೆಯಿಂದಾಗಿ ರಾಜ್​ಕೋಟ್​​ ಜಿಲ್ಲೆಯ ಧೋರಾಜಿ ನಗರ ಮುಳುಗಡೆಯಾಗಿದೆ. ಹಲವು ಮನೆಗಳು, ವಾಹನಗಳು ಜಲಾವೃತವಾಗಿವೆ.

6 ಗಂಟೆಗಳಲ್ಲಿ ಸುಮಾರು 300 ಮಿಮೀ ದಾಖಲೆಯ ಮಳೆಯಾಗಿದೆ. ಈ ಪ್ರದೇಶದಲ್ಲಿ ಅಪಾಯದಲ್ಲಿದ್ದ 70 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ನಾಲ್ಕು ದಿನಗಳ ಕಾಲ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ತೇಲಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಧೋರಾಜಿಯಲ್ಲಿ 6 ಗಂಟೆಗಳಲ್ಲಿ 9.5 ಇಂಚುಗಳಷ್ಟು ಮಳೆಯಿಂದಾಗಿ ನಗರವೇ ಜಲಾವೃತವಾಗಿದೆ.

ಸೂರತ್‌ ಜಿಲ್ಲೆಯಲ್ಲೂ ವ್ಯಾಪಕ ಮಳೆ ಬಿದ್ದಿದೆ. ಉಕೈ ಅಣೆಕಟ್ಟೆಯ ನೀರಿನ ಮಟ್ಟ 4 ಅಡಿಗಳಷ್ಟು ಹೆಚ್ಚಾಗಿದೆ. ಇದರಿಂದಾಗಿ ತಾಪಿ ನದಿ ಉಕ್ಕಿ ಹರಿಯುತ್ತಿದೆ. ನದಿಪಾತ್ರದ ಹಲವು ರಸ್ತೆಗಳನ್ನು ಬಂದ್​ ಮಾಡಲಾಗಿದೆ.

ಇದನ್ನೂ ಓದಿ: ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಕೆ: ರಾಷ್ಟ್ರ ರಾಜಧಾನಿಗೆ ಮುಗಿಯದ ಪ್ರವಾಹ ಭೀತಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.