ಕಣ್ಣಿಗೆ ಬಿದ್ದ ವಾಹನಗಳ ಮೇಲೆ ಕಲ್ಲು ತೂರಿದ ಬಾಲಕ... 36 ಕಾರುಗಳ ಗಾಜುಗಳು ಪುಡಿ - ಪುಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಗುಮ್ಲಾದಲ್ಲಿ ಅಸ್ವಸ್ತ ಬಾಲಕನಿಂದ ಕಾರಿನ ಮೇಲೆ ಕಲ್ಲು ತೂರಾಟ

🎬 Watch Now: Feature Video

thumbnail

By

Published : Jun 18, 2022, 7:18 AM IST

Updated : Feb 3, 2023, 8:23 PM IST

ಜೂನ್​ 16ರ ತಡರಾತ್ರಿ ಬಾಲಕನೊಬ್ಬ ಜಾರ್ಖಂಡ್​ನ ಗುಮ್ಲಾದಲ್ಲಿ ಕಣ್ಣಿಗೆ ಬಿದ್ದ ಕಾರ್​ಗಳ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದನು. ಯಾವುದೋ ಒಂದು ಶಕ್ತಿಯಿಂದ ಈ ರೀತಿ ಆಗಿದೆ ಎಂದು ನಗರದ ವಾಸಿಗಳು ಬಹಳ ಭಯಭೀತರಾಗಿದ್ದು, ನಗರದಲ್ಲಿ ವಿವಿಧ ರೀತಿಯಲ್ಲಿ ವದಂತಿಗಳ ಹರಿದಾಡುತ್ತಿದ್ದವು. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಎಲ್ಲ ವದಂತಿಗಳು ಮತ್ತು ಊಹಾಪೋಹಗಳಿಗೆ ಅಂತ್ಯ ಸಿಕ್ಕಿದೆ. 12 ರಿಂದ 13 ವರ್ಷದ ಮಾನಸಿಕ ಅಸ್ವಸ್ಥ ಬಾಲಕನೊಬ್ಬ ನಗರದ ಪಾಲ್ಕೋಟ್ ರಸ್ತೆ, ಮುಖ್ಯರಸ್ತೆ ಸೇರಿದಂತೆ ವಿವಿಧ ಚೌಕ್‌ಗಳಲ್ಲಿ ನಿಲ್ಲಿಸಿದ್ದ ಸುಮಾರು 36ಕ್ಕೂ ಹೆಚ್ಚು ಕಾರ್​ಗಳ ಮೇಲೆ ಕಲ್ಲು ಎಸೆದಿದ್ದನು. ಇದರಿಂದಾಗಿ ಕಾರುಗಳ ಗಾಜುಗಳು ಪುಡಿ-ಪುಡಿಯಾಗಿವೆ. ವಾಹನಗಳನ್ನು ಧ್ವಂಸಗೊಳಿಸಿದ ಘಟನೆಗಳಿಂದ ಸ್ಥಳೀಯ ಜನರೊಂದಿಗೆ ಪೊಲೀಸರೂ ಕಂಗಾಲಾದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಘಟನೆಯ ಕುರಿತು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಪ್ರಾಪ್ತರ ಸಂಬಂಧಿಕರು ಚಿಕಿತ್ಸೆಗಾಗಿ ರಾಂಚಿಗೆ ಕರೆದೊಯ್ದಿದ್ದಾರೆ. ಇದರೊಂದಿಗೆ ಯಾವುದೇ ರೀತಿಯ ಪಿತೂರಿ ಅಥವಾ ಸಮಾಜ ವಿರೋಧಿ ಅಂಶಗಳ ಒಳಗೊಳ್ಳುವಿಕೆಯನ್ನು ಅವರು ನಿರಾಕರಿಸಿದರು. ನಗರದಲ್ಲಿ ಸಂಪೂರ್ಣ ಶಾಂತಿ ನೆಲೆಸಿದ್ದು, ಜನರು ಯಾವುದೇ ರೀತಿಯ ವದಂತಿಗಳಿಂದ ದೂರವಿರಬೇಕು ಎಂದರು.
Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.