ಪ್ರವಾಹದ ನೀರಿನಲ್ಲಿ ಅರ್ಧದಷ್ಟು ಮುಳುಗಿದ ಶಾಲಾ ಬಸ್; ಪುಟ್ಟ ಮಕ್ಕಳನ್ನು ರಕ್ಷಿಸಿದ ಸ್ಥಳೀಯರು - ತೆಲಂಗಾಣ ಶಾಲಾ ಬಸ್ ಸುದ್ದಿ
🎬 Watch Now: Feature Video
ತೆಲಂಗಾಣ: 25 ಮಕ್ಕಳಿದ್ದ ಖಾಸಗಿ ಶಾಲಾ ಬಸ್ವೊಂದು ನೀರಿನಲ್ಲಿ ಸಿಲುಕಿಕೊಂಡ ಘಟನೆ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ನಡೆಯಿತು. ಇಲ್ಲಿನ ಮಾಚನಪಲ್ಲಿ-ಕೋಡೂರು ನಡುವೆ ರೈಲ್ವೆಯ ಕೆಳ ಸೇತುವೆ ಕಾಮಗಾರಿ ನಡೆಯುತ್ತಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ಅಂಡರ್ ಬೈಪಾಸ್ನಲ್ಲಿ ಸುಮಾರು 4-5 ಅಡಿಗಳಷ್ಟು ನೀರು ನಿಂತಿದೆ. ಇದನ್ನರಿಯದ ಬಸ್ ಚಾಲಕ ಅಂಡರ್ಪಾಸ್ನಲ್ಲಿ ವಾಹನ ಚಲಾಯಿಸಿದ್ದಾನೆ. ರಾಮಚಂದ್ರಾಪುರ ಮತ್ತು ಸೂಗೂರುಗಡ್ಡ ತಾಂಡಾದಿಂದ ಶಾಲೆಗೆ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಅಂಡರ್ಪಾಸ್ನ ನೀರಿನಲ್ಲಿ ಸಿಲುಕಿದೆ. ಬಸ್ಸಿನೊಳಗೆ ನೀರು ನುಗ್ಗಿದ್ದರಿಂದ ಚಾಲಕ ಗಾಬರಿಗೊಂಡು ಸ್ಥಳೀಯರನ್ನು ಸಹಾಯಕ್ಕೆ ಕರೆದಿದ್ದಾನೆ. ಸ್ಥಳೀಯರು ಕೂಡಲೇ ಸ್ಪಂದಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತಂದರು.
Last Updated : Feb 3, 2023, 8:24 PM IST