ಚಿಕ್ಕೋಡಿ: ಕಾಲೇಜಿನಲ್ಲಿ ಹಳ್ಳಿ ಬದುಕಿನ ಅನಾವರಣ- ವಿಡಿಯೋ
🎬 Watch Now: Feature Video
Published : Jan 7, 2024, 8:25 AM IST
ಚಿಕ್ಕೋಡಿ(ಬೆಳಗಾವಿ): ಇಲ್ಲಿನ ಬಸವ ಪ್ರಭು ಕಾಲೇಜಿನಲ್ಲಿ ಶನಿವಾರ ಸಂಪೂರ್ಣ ಗ್ರಾಮೀಣ ಬದುಕಿನ ಅನಾವರಣವಾಯಿತು. ಜನರು ಹಳೆಯ ಸಂಪ್ರದಾಯಗಳನ್ನು ಮರೆಯುತ್ತಿರುವ ಈ ದಿನಮಾನಗಳಲ್ಲಿ ತಮ್ಮ ಬೇರುಗಳನ್ನು ಮತ್ತೆ ನೆನಪಿಸುವ ಸಲುವಾಗಿ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಹಳ್ಳಿ ಶೈಲಿಯಲ್ಲಿ ವಿನೂತನ ಕಾರ್ಯಕ್ರಮ ಏರ್ಪಡಿಸುವಂತೆ ಟಾಸ್ಕ್ ನೀಡಿತ್ತು. ಇದಕ್ಕಾಗಿ ವಿದ್ಯಾರ್ಥಿನಿಯರು ಇಳಕಲ್ ಸೀರೆಯುಟ್ಟು ಕಂಗೊಳಿಸಿದರೆ, ತಾವೂ ಯಾರಿಗೂ ಕಮ್ಮಿ ಇಲ್ಲವೆಂಬಂತೆ ಗಂಡು ಮಕ್ಕಳು ಪಂಚೆಯುಟ್ಟು ಮಿಂಚಿದರು.
ಕಾಲೇಜು ಆವರಣದಲ್ಲಿ ಒಂದೆಡೆ ಹೆಣ್ಮಕ್ಕಳು ರೊಟ್ಟಿ ತಟ್ಟಿದರೆ, ಇನ್ನೊಂದೆಡೆ ಲೋಕಸಭೆಯಲ್ಲಿ ನಡೆಯುವ ರಾಜಕೀಯ ಚರ್ಚೆ, ಪುರಾತನ ಕಾಲದಲ್ಲಿ ನಡೆಯುವ ರಾಜರ ದರ್ಬಾರ್ ಗಮನ ಸೆಳೆಯಿತು. ವಿದ್ಯಾರ್ಥಿಗಳು ತಮ್ಮ ಮನೆಯಿಂದ ಮೊಸರನ್ನ, ಪಾಯಸ, ಪಾನಿಪುರಿ, ಮಜ್ಜಿಗೆ, ಸಜ್ಜಿರೊಟ್ಟಿ ಊಟ, ಪಾನಕಗಳನ್ನು ತಂದಿದ್ದರು. ಇವುಗಳನ್ನು ಮಾರಾಟ ಮಾಡಿದರು.
ಬಸವ ಪ್ರಭು ಕಾಲೇಜು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಬಾರಿ ಗ್ರಾಮೀಣ ಸೊಗಡಿನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಇದನ್ನೂ ಓದಿ: ಸಿರಿಧಾನ್ಯ, ಸಾವಯವ ಮೇಳ: ಬಾಳೆ ನಾರಿನಿಂದ ತಯಾರಾಯ್ತು ವ್ಯಾನಿಟಿ ಬ್ಯಾಗ್, ಟೇಬಲ್ ಮ್ಯಾಟ್, ಪರ್ಸ್