ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದ ಆರ್​ಟಿಸಿ ಬಸ್.. 3 ಮಂದಿ ಸಾವು - Bus Brake failure

🎬 Watch Now: Feature Video

thumbnail

By ETV Bharat Karnataka Team

Published : Nov 6, 2023, 5:40 PM IST

ವಿಜಯವಾಡ : ನಗರದ ಪಂಡಿತ್ ನೆಹರೂ ಬಸ್ ನಿಲ್ದಾಣದಲ್ಲಿ ಆರ್​ಟಿಸಿ ಬಸ್​ವೊಂದು ಅವಾಂತರ ಸೃಷ್ಟಿಸಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಕಂಡಕ್ಟರ್ ಜತೆಗೆ ಮಹಿಳೆ ಹಾಗೂ 10 ತಿಂಗಳ ಮಗು ಸೇರಿದೆ. ಇತರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

ಪ್ಲಾಟ್‌ಫಾರ್ಮ್ ಸಂಖ್ಯೆ 12ರಲ್ಲಿ ಈ ಬಸ್​ ಅಪಘಾತ ಸಂಭವಿಸಿದೆ. ಪ್ಲಾಟ್‌ಫಾರ್ಮ್ 11 ಮತ್ತು 12 ರಲ್ಲಿನ ಪೀಠೋಪಕರಣಗಳು ಕೂಡಾ ಅಪಘಾತದಲ್ಲಿ ನಾಶವಾಗಿವೆ ಎಂಬುದಾಗಿ ತಿಳಿದು ಬಂದಿದೆ.

ಬಸ್​ನಲ್ಲಿನ ಬ್ರೇಕ್ ವೈಫಲ್ಯದಿಂದ ಈ ಅವಗಢ ಸಂಭವಿಸಿರುವುದಾಗಿ ತಿಳಿದುಬಂದಿದೆ. ವಿಜಯವಾಡದ ಆಟೋನಗರ ಡಿಪೋಗೆ ಸೇರಿದ ಬಸ್ ಗುಂಟೂರಿಗೆ ಹೋಗುತ್ತಿದ್ದಾಗ ಈ ಅವಘಡ ನಡೆದಿದೆ ಸಂಭವಿಸಿದೆ. ಮೃತ ಕಂಡಕ್ಟರ್ ಗುಂಟೂರು-2 ಡಿಪೋದ ವೀರಯ್ಯ ಎಂದು ಗುರುತಿಸಲಾಗಿದೆ. ಆರ್​ಟಿಸಿ ಬಸ್​ನ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಪ್ರಯಾಣಿಕರ ಮೇಲೆ ಹರಿದ ಬಸ್​; ಕಾಲುವೆಗೆ ನುಗ್ಗಿ ಶಾಲಾ ವಾಹನ ಪಲ್ಟಿ: ಆಂಧ್ರದಲ್ಲಿ ಪ್ರತ್ಯೇಕ ಅವಘಡ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.