ಒಂಬತ್ತು ವರ್ಷದ ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿವೈನ್​ ಸ್ಟಾರ್​.. ವಿಡಿಯೋ ನೋಡಿ - ETV Bharath Kannada news

🎬 Watch Now: Feature Video

thumbnail

By

Published : May 27, 2023, 4:57 PM IST

ನವದೆಹಲಿ: ಇಲ್ಲಿ ನಡೆಯುತ್ತಿರುವ ಗರೀಬ್ ಕಲ್ಯಾಣ್ ಕಾರ್ಯಕ್ರಮದಲ್ಲಿ ನಟ ರಿಷಬ್​ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು,"ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ. ನಮಗೆ ಮೋದಿಜಿಯಂತಹ ನಾಯಕ ಸಿಕ್ಕಿರುವುದು ಒಳ್ಳೆಯದು, ನಾನು ಅವರನ್ನು ಅಭಿನಂದಿಸುತ್ತೇನೆ. ಇಂದು ನಡೆಯುತ್ತಿರುವ 'ನೌ ಸಾಲ್ ಕಿ ಸೇವಾ ಸುಶಾಸನ್ ಗರೀಬ್ ಕಲ್ಯಾಣ್' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ.

ಇದರ ಜೊತೆಗೆ ಇತ್ತೀಚೆಗೆ ಮೋದಿ ಬೆಂಗಳೂರಿಗೆ ಬಂದಿದ್ದಾಗ ಭೇಟಿ ಕೊಟ್ಟಿದ್ದನ್ನು ನೆನೆದಿದ್ದಾರೆ. "ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಮೋದಿಯವರನ್ನು ಭೇಟಿ ಮಾಡಿ ಕರ್ನಾಟಕದ ಸಿನಿಮಾ ಇಂಡಸ್ಟ್ರಿಗೆ ಏನು ಬೇಕು ಎಂಬುದರ ಬಗ್ಗೆ ಬೇಡಿಕೆ ಇಟ್ಟಿದ್ದೆವು, ಕರ್ನಾಟಕಕ್ಕೆ ಫಿಲ್ಮ್ ಸಿಟಿ ನಿರ್ಮಾಣವಾಗಬೇಕು, ಒಳ್ಳೆಯ ಥಿಯೇಟರ್‌ಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದೆವು" ಎಂದಿದ್ದಾರೆ.  

ನಟ ರಿಷಬ್​ ಶೆಟ್ಟಿ ಚಿತ್ರರಂಗದಲ್ಲಿ ಬಹಳಾ ಕ್ರಿಯಾಶೀಲರಾಗಿದ್ದಾರೆ. ಕಿರಿಕ್​ ಪಾರ್ಟಿ ನಿರ್ದೇಶನದ ಮೂಲಕ ಸಿನಿಮಾರಂಗಕ್ಕೆ ಭರ್ಜರಿ ಎಂಟ್ರಿ ಪಡೆದು ನಂತರ ನಿರ್ಮಾಣ ಸಂಸ್ಥೆ ಕಟ್ಟುವ ಮಟ್ಟಕ್ಕೆ ಬೆಳೆದರು. ಇತ್ತೀಚೆಗೆ ಸಿನಿಮಾದ ಪ್ರಚಾರಕ್ಕಾಗಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಅದಕ್ಕೆ ಕೆರಾಡಿ ಸ್ಟುಡಿಯೋಸ್​ ಎಂದು ತಮ್ಮ ಹುಟ್ಟೂರಿನ ಹೆಸರನ್ನೇ ಇಟ್ಟಿದ್ದಾರೆ. 

ಇದನ್ನೂ ಓದಿ:  ಕಾನ್​ ರೆಡ್​ ಕಾರ್ಪೆಟ್​ ಮೇಲೆ ಅನುಷ್ಕಾ ಮೊದಲ ಹೆಜ್ಜೆ: ನಟಿಯ ಅಂದಕ್ಕೆ ಫ್ಯಾನ್ಸ್​​​ ​ ಫಿದಾ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.