ರೈತರು, ಟೋಲ್ ನೌಕರರ ನಡುವೆ ತೀವ್ರ ಘರ್ಷಣೆ: ಟೋಲ್ ಪ್ಲಾಜಾದಲ್ಲಿ ಪರಿಸ್ಥಿತಿ ಉದ್ವಿಗ್ನ - ETv Bharat Karnataka
🎬 Watch Now: Feature Video

ಹೋಶಿಯಾರಪುರ (ಪಂಜಾಬ್): ಹೋಶಿಯಾರಪುರ ತಾಂಡಾದ ಚೌಲಾಗ್ ಟೋಲ್ ಪ್ಲಾಜಾದಲ್ಲಿ ರೈತರು ಮತ್ತು ಟೋಲ್ ನೌಕರರ ನಡುವೆ ಭಾರಿ ಘರ್ಷಣೆ ನಡೆದಿದೆ. ಕಳೆದ ಹಲವು ದಿನಗಳಿಂದ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿದ ಧರಣಿ ತೆರೆದು, ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಚೌಲಾಂಗ್ ಹಾಗೂ ಜಿಲ್ಲೆಯ ಇತರ ಟೋಲ್ ಪ್ಲಾಜಾಗಳಲ್ಲಿ ಜನವರಿ 15 ರವರೆಗೆ ಬಂದ್ ಮಾಡುವ ಕಾರ್ಯಕ್ರಮ ರೂಪಿಸಲಾಗಿತ್ತು. ಇಂದು ಬೆಳಗ್ಗೆ ರೈತರು ಟೋಲ್ ಬಳಿ ಆಗಮಿಸುವ ಮೊದಲೇ ಟೋಲ್ ನೌಕರರು ಜಮಾಯಿಸಿದ್ದರು. ಈ ವೇಳೆ ಯಾವುದೇ ರೀತಿಯ ಸಂಘರ್ಷ ನಡೆಯದಂತೆ ತಾಂಡಾ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರೂ, ಟೋಲ್ ನೌಕರರು ಮತ್ತು ರೈತರು ಮುಖಾಮುಖಿಯಾಗಿ ವಾತಾವರಣವು ಉದ್ವಿಗ್ನಗೊಂಡಿತ್ತು. ಇದರಿಂದ ಪೊಲೀಸರು ಲಾಠಿ ಪ್ರಹಾರವನ್ನೂ ನಡೆಸಿದರು. ಮತ್ತೊಂದೆಡೆ ವಾಹನಗಳು ಟೋಲ್ ಪಾವತಿಸದೇ ಉಚಿತವಾಗಿ ಸಂಚಾರ ನಡೆಸಿದವು.
Last Updated : Feb 3, 2023, 8:35 PM IST