ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಬೋಟ್​, 7 ಮೀನುಗಾರರ ರಕ್ಷಣೆ: ವಿಡಿಯೋ - rescue of 7 fishermen

🎬 Watch Now: Feature Video

thumbnail

By ETV Bharat Karnataka Team

Published : Jan 17, 2024, 8:18 PM IST

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್ ಒಡೆದ ಪರಿಣಾಮ ಬೋಟ್​ನ ಬಳಗೆ ನೀರು ನುಗ್ಗಿದ ಘಟನೆ ಕಾರವಾರ - ಗೋವಾ ಗಡಿಭಾಗದಲ್ಲಿ ನಡೆದಿದೆ. ಮುಳುಗುವ ಹಂತದಲ್ಲಿದ್ದ ಬೋಟ್​ ಅನ್ನು ಮತ್ತು ಅದರಲ್ಲಿದ್ದ  7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. 

ರಕ್ಷಣಾ ಕಾರ್ಯಾಚರಣೆ ಭಾಗಿಯಾಗಿದ್ದ ಗಣೇಶ್​ ಮಾತನಾಡಿ, "ಮಂಗಳೂರಿನಿಂದ ಕಳೆದ ಮೂರು ದಿನಗಳ ಹಿಂದೆ ಆಳ ಸಮುದ್ರದಲ್ಲಿ, ಮೀನುಗಾರಿಕೆಗೆ ತೆರಳಿದ್ದ ರಾಯಲ್ ಬ್ಲೂ ಹೆಸರಿನ ಮೀನುಗಾರಿಕಾ ಬೋಟ್​ನ ತಳಭಾಗ ಒಡೆದು ಒಳಭಾಗಕ್ಕೆ ನೀರು ನುಗ್ಗಲಾರಂಭಿಸಿತ್ತು. ಬಳಿಕ ಮೀನುಗಾರರು ನೀರನ್ನು ಹೊರ ಹಾಕಲು ಪ್ರಯತ್ನಿಸಿದ್ದರೂ, ಹೆಚ್ಚು ನೀರು ತುಂಬುತ್ತಿದ್ದ ಕಾರಣ ಬೋಟ್​ ಮುಳುಗುವ ಹಂತದಲ್ಲಿದ್ದತ್ತು. ತಕ್ಷಣ ಮೀನುಗಾರರು ಮಾಲೀಕರು, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಬಳಿಕ ನಾಲ್ಕೈದು ಬೋಟ್​ಗಳು ಮೀನುಗಾರರು ನೆರವಿಗೆ ಧಾವಿಸಿದವು. ಕೊನೆಗೆ ಎರಡು ಬೋಟ್​ಗಳಿಗೆ ಮುಳುಗುವ ಹಂತದಲ್ಲಿದ್ದ ಬೋಟ್ ಅನ್ನು ಕಟ್ಟಿಕೊಂಡು ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ನೆರವಿನೊಂದಿಗೆ ಕಾರವಾರ ಬಂದರಿಗೆ ಎಳೆದು ತರಲಾಯಿತು. ಬೋಟ್​ನಲ್ಲಿದ್ದ ಎಲ್ಲ ಮೀನುಗಾರರು ಸುರಕ್ಷಿತವಾಗಿದ್ದಾರೆ. ಬೋಟ್ ಹಾನಿಯಿಂದ ಲಕ್ಷಾಂತರ ರೂ ನಷ್ಟವಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಹೊನ್ನಾವರದ ಯುವಕನ ಕೈಚಳಕ: 1200 ಚಾಕ್​ಪೀಸ್ ಬಳಸಿ ರಾಮ ಮಂದಿರ ಮಾದರಿ ನಿರ್ಮಾಣ!

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.