ತುಮಕೂರು: ಹಲಸಿನ ಮರವೇರಿ ತಂತಿಗೆ ಸಿಲುಕಿದ್ದ ಕರಡಿಯ ರಕ್ಷಣೆ - Rescue of bear trapped in wire in Tumkur
🎬 Watch Now: Feature Video
ತುಮಕೂರು : ಹಲಸಿನ ಹಣ್ಣು ತಿನ್ನಲು ಮರವೇರಿದ್ದ ಕರಡಿ ಮರದಲ್ಲಿದ್ದ ಮುಳ್ಳು ತಂತಿಗೆ ಸಿಲುಕಿದ್ದು, ಬಳಿಕ ಕರಡಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ನಡೆದಿದೆ. ಕುರಂಕೋಟೆಯ ಸಿದ್ದರಾಜು ಎಂಬ ರೈತರ ಜಮೀನಿನಲ್ಲಿ ಹಲಸಿನ ಮರವನ್ನು ಹತ್ತಿ ಕೆಳಗೆ ಇಳಿಯುವಾಗ ಮುಳ್ಳುತಂತಿಗೆ ಕರಡಿಯ ಕಾಲು ಸಿಲುಕಿಕೊಂಡಿದೆ. ಮುಂಜಾನೆ ರೈತರು ತಮ್ಮ ಜಮೀನಿಗೆ ಕೆಲಸಕ್ಕೆ ತೆರಳುವಾಗ ಹಲಸಿನ ಮರದಲ್ಲಿ ತಂತಿಗೆ ಸಿಲುಕಿಕೊಂಡ ಕರಡಿಯನ್ನು ಕಂಡು ಕೊರಟಗೆರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಸುರೇಶ್, ಪಶು ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ನಾಗರಾಜು, ಮಂಜುನಾಥ, ರಘು, ಚಾಂದ್ಪಾಷಾ ಅವರು ಕಾರ್ಯಾಚರಣೆ ನಡೆಸಿ ಕರಡಿಯನ್ನು ಮತ್ತೆ ಸುರಕ್ಷಿತವಾಗಿ ಅರಣ್ಯಕ್ಕೆ ಸ್ಥಳಾಂತರಿಸಿದ್ದಾರೆ.
Last Updated : Feb 3, 2023, 8:24 PM IST