ಬೆಂಗಳೂರಿಗೆ ಮೋದಿ ಆಗಮನ: ಓಡಾಡುವ ಮುನ್ನ ಗಮನ ಹರಿಸುವಂತೆ ರವಿಕಾಂತೇಗೌಡ ಮನವಿ - Bengaluru joint commissioner of police
🎬 Watch Now: Feature Video
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಕೆಲವು ಕಡೆ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಭವನ ರಸ್ತೆ, ಪ್ಯಾಲೆಸ್ ರಸ್ತೆ, ರೇಸ್‍ಕೋರ್ಸ್, ಸ್ಯಾಂಕಿ ರೋಡ್, ಶೇಷಾದ್ರಿಪುರಂ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸವಾರರು ಈ ಮಾರ್ಗಗಳಲ್ಲಿ ಸಂಚರಿಸದೇ ಪರ್ಯಾಯ ರಸ್ತೆ ಬಳಸುವಂತೆ ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದ್ದೇವೆ. ಅದರಂತೆ ಸಾರ್ವಜನಿಕರು ಸಂಚರಿಸುವಂತೆ ಮನವಿ ಮಾಡಿದರು.
Last Updated : Feb 3, 2023, 8:32 PM IST