ಶತಶತಮಾನಗಳ ಹೋರಾಟದ ಫಲವಾಗಿ ಕಾನೂನು ಬದ್ದವಾಗಿ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ

🎬 Watch Now: Feature Video

thumbnail

By ETV Bharat Karnataka Team

Published : Dec 11, 2023, 8:31 PM IST

ತುಮಕೂರು : ಉತ್ತರ ಪ್ರದೇಶದ ಅಯೋಧ್ಯೆಯಿಂದ ಬಂದಿದ್ದ ಪವಿತ್ರ ಮಂತ್ರಾಕ್ಷತೆಯನ್ನು ಭಕ್ತರಿಗೆ ವಿತರಿಸುವ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪವಿತ್ರ ಮಂತ್ರಾಕ್ಷತೆಯನ್ನು ತುಮಕೂರು ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು. ತುಮಕೂರಿನ 10 ತಾಲೂಕುಗಳಿಗೆ ಹಿಂದೂ ಕಾರ್ಯಕರ್ತರ ಮೂಲಕ ಪವಿತ್ರ ಮಂತ್ರಾಕ್ಷತೆ ಕಳುಹಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಶತಶತಮಾನಗಳಿಂದಲೂ ರಾಮಭಕ್ತರು ಕಾತರದಿಂದ ಕಾಯುತ್ತಿರುವಂತಹ ಕ್ಷಣಕ್ಕೆ ಕಾನೂನು ಬದ್ಧವಾಗಿ ರಾಮ ಜನ್ಮ ಭೂಮಿಯಲ್ಲಿ ಭವ್ಯವಾದ ಮಂದಿರವು ಸಂಕ್ರಾಂತಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಲೋಕಾರ್ಪಣೆಗೊಳ್ಳಲಿರುವ ದಿನದಂದು ಭಕ್ತರರೆಲ್ಲರೂ ಅಯೋಧ್ಯೆಗೆ ಬಂದು ಸಂಭ್ರಮಿಸುವ ಅಗತ್ಯವಿಲ್ಲ ಬದಲಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ದೊಡ್ಡ ಪರದೆಯ ಮೂಲಕ ಅದನ್ನು ವೀಕ್ಷಿಸಿ ಭಕ್ತಿ ಪರಾಕಾಷ್ಟೆ ಮೆರೆಯಬೇಕು. 

ಅಲ್ಲದೇ ಅಂದು ಪ್ರತಿ ಗ್ರಾಮಗಳಲ್ಲಿರುವ ದೇವಾಲಯಗಳಲ್ಲಿ ಪೂಜೆ ಹೋಮ ಹವನ ಹಾಗೂ ಭಜನೆಗಳ ಮೂಲಕ ಭಕ್ತಿ ಸಮರ್ಪಣೆ ಮಾಡಬೇಕು. ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂಬ ಅಭಿಲಾಷೆ ಹೊಂದಲಾಗಿದೆ ಎಂದು ಹೇಳಿದರು.  

ಇದನ್ನೂ ಓದಿ : ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ: ಇಂದಿನಿಂದ ಮೂರು ದಿನ ಅದ್ಧೂರಿಯಾಗಿ ನಡೆಯಲಿದೆ ಜಾತ್ರೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.