ಕಾಲುವೆಯಲ್ಲಿ ಈಜಿ ಬಂದ ಕಾಡು ಕೋಣ : ರಕ್ಷಿಸಿದ ಕ್ಷಣಾರ್ಧದಲ್ಲಿ ಸಾವು - ಶಹಾಪುರದ ಉಪ ಅರಣ್ಯ ವಲಯಾಧಿಕಾರಿ ಕಾಶಪ್ಪ
🎬 Watch Now: Feature Video
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗದಿಂದ ಹೊಸಕೇರಾ ಮಧ್ಯದ ಎಸ್‍ಬಿಸಿ ಕಾಲುವೆಯಲ್ಲಿ ದೈತ್ಯ ಕಾಡುಕೋಣವೊಂದು ಹರಿದು ಸಾಗುತ್ತಿರುವುದು ಕಂಡ ಗ್ರಾಮದ ಶಿವರಾಜ ವನದುರ್ಗ ಹಾಗೂ ಇತರರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಸುರಪುರ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಮೌಲಾಲಿಸಾಬ ನೇತೃತ್ವದ ತಂಡ ಗ್ರಾಮಸ್ಥರೊಂದಿಗೆ ಹರಸಾಹಸ ಪಟ್ಟು ಕಾಡುಕೋಣವನ್ನು ಸೆರೆ ಹಿಡಿದು ವಾಹನವೊಂದರಲ್ಲಿ ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಇನ್ನು ಕಾಡುಕೋಣ ಈ ಭಾಗದಲ್ಲಿ ಎಲ್ಲೂ ಕಂಡು ಬರುವದಿಲ್ಲ. ಅಂತಹ ಅರಣ್ಯವು ಇಲ್ಲಿಲ್ಲ. ಇದು ಎಲ್ಲೋ ಬೇರೆ ಕಡೆಯಿಂದ ಕಾಲುವೆಯಲ್ಲಿ ಬಿದ್ದಿದ್ದು, ಮೇಲೇರಲು ಆಗದೆ ಸುಮಾರು ಕೀ.ಮೀನಿಂದ ಹರಿದುಕೊಂಡು ಈಜುತ್ತಾ ಬಂದಿದೆ. ಬಹಳ ಸೂಕ್ಷ್ಮ ಪ್ರಾಣಿ ಇದಾಗಿದ್ದರಿಂದ ಜನರ ಗದ್ದಲಕ್ಕೆ ಗಾಬರಿಗೊಂಡಿದ್ದು, ಹೃದಯಾಘಾತವಾಗಿ ಮೃತಪಟ್ಟಿದೆ. ಮೃತ ಪ್ರಾಣಿ ದೇಹವನ್ನು ಅರಣ್ಯ ಇಲಾಖೆ ನಿಯಮದಂತೆ ಸುಡಲಾಗುತ್ತದೆ ಎಂದು ಶಹಾಪುರದ ಉಪ ಅರಣ್ಯ ವಲಯಾಧಿಕಾರಿ ಕಾಶಪ್ಪ ತಿಳಿಸಿದರು.
ಇದನ್ನೂ ಓದಿ: ಮಂಡ್ಯ: ಜಮೀನಿನಲ್ಲಿ ಸಿಕ್ಕ ಎರಡು ಚಿರತೆ ಮರಿಗಳ ರಕ್ಷಣೆ