ಮೈಸೂರು: ಹೋಟೆಲ್ನಲ್ಲಿ ದೋಸೆ ಸವಿದ ಪ್ರಿಯಾಂಕಾ ಗಾಂಧಿ..! - ಈಟಿವಿ ಭಾರತ ಕನ್ನಡ
🎬 Watch Now: Feature Video
ಮೈಸೂರು: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಚುನಾವಣಾ ಪ್ರಚಾರದ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ, ನಿನ್ನೆ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಬೆಳಗ್ಗೆ ಶೃಂಗೇರಿಗೆ ಹೊರಡುವ ಮುನ್ನ, ಮೈಸೂರಿನ ಅಗ್ರಹಾರದಲ್ಲಿರುವ ಹೋಟೆಲ್ವೊಂದರಲ್ಲಿ ಮಸಾಲೆ ದೋಸೆ ಹಾಗೂ ಇಡ್ಲಿಯನ್ನ ಸವಿದರು. ಮಂಗಳವಾರ ಟಿ.ನರಸೀಪುರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಶೃಂಗೇರಿಗೆ ಹೊರಡುವ ಮುನ್ನ, ರಸ್ತೆ ಬದಿಯ ಹೋಟೆಲ್ಗೆ ತೆರಳಿ ದೋಸೆ ಸವಿದಿದ್ದಾರೆ. ಅದೇ ಹೋಟೆಲ್ನಲ್ಲಿ ದೋಸೆ ತಿನ್ನಲು ಬಂದಿದ್ದ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರ ಜೊತೆ ಮಾತನಾಡಿ, ಬಳಿಕ ತಾವೇ ಮಸಾಲೆ ದೋಸೆಯನ್ನ ತಯಾರಿಸಿದ್ದಾರೆ. ಆನಂತರ ಮಾಧ್ಯಮಗಳ ಜೊತೆ ಮಾತನಾಡಿ, ಇಡ್ಲಿ ಹಾಗೂ ದೋಸೆ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಡಿ ಕೆ.ಶಿವಕುಮಾರ್ ಹಾಗೂ ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ ಸಹ ಇದ್ದರು.
ಇದನ್ನೂ ಓದಿ: ಶಾಸಕ ನೆಹರು ಓಲೇಕಾರ ಬಿಜೆಪಿ ತೊರೆದಿಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಕಲಕೋಟಿ