ಆಸ್ಟ್ರೇಲಿಯಾಗೆ ಬಂದಿಳಿದ ಪ್ರಧಾನಿ ಮೋದಿ, ಭಾರತೀಯರಿಂದ ಆತ್ಮೀಯ ಸ್ವಾಗತ: ವಿಡಿಯೋ
🎬 Watch Now: Feature Video
ಸಿಡ್ನಿ(ಆಸ್ಟ್ರೇಲಿಯಾ): ಜಪಾನ್, ಪಪುವಾ ನ್ಯೂಗಿನಿಯಾ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಸಿಡ್ನಿಗೆ ಸೋಮವಾರ ಸಂಜೆ ಬಂದಿಳಿದರು. ಕಾಂಗರೂ ನಾಡಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಪ್ರಯಾಣಿಸಿದ್ದಾರೆ. ಸಿಡ್ನಿಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದ ಮೋದಿ ಅವರನ್ನು ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ ಅವರನ್ನು ಕಾಣಲು ಬಂದಿದ್ದ ಭಾರತೀಯರಿಗೆ ಹಸ್ತಲಾಘವ ಮಾಡಿದರು. ಕೆಲವರಿಗೆ ಹಸ್ತಾಕ್ಷರ ನೀಡಿದರೆ, ಸೆಲ್ಫಿ ಕೂಡ ನೀಡಿದರು.
ಪ್ರವಾಸದ ವೇಳೆ ಆಸ್ಟ್ರೇಲಿಯಾದ ಪರಮಟ್ಟ ಎಂಬಲ್ಲಿರುವ ಹ್ಯಾರಿಸ್ ಪಾರ್ಕ್ ಪ್ರದೇಶಕ್ಕೆ 'ಲಿಟಲ್ ಇಂಡಿಯಾ' ಎಂದು ಘೋಷಣೆ ಮಾಡಲಿದ್ದಾರೆ. ಹ್ಯಾರಿಸ್ ಪಾರ್ಕ್ ಪ್ರದೇಶದಲ್ಲಿ ಭಾರತೀಯ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ನೆಲೆಯೂರಿದೆ. ಈ ಪ್ರದೇಶ ಭಾರತೀಯರ ಒಡೆತನದಲ್ಲಿದೆ. ಹೀಗಾಗಿ ಈ ಪ್ರದೇಶವನ್ನು ಅನೌಪಚಾರಿಕವಾಗಿ 'ಲಿಟಲ್ ಇಂಡಿಯಾ' ಎಂದು ಕರೆಯಲಾಗುತ್ತದೆ. ಇದನ್ನೀಗ ಪ್ರಧಾನಿ ಮೋದಿ ಅವರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.
ಇದನ್ನೂ ಓದಿ: ಫಿಜಿ, ಪಪುವಾ ನ್ಯೂಗಿನಿ ದೇಶಗಳಿಂದ ಪ್ರಧಾನಿ ಮೋದಿಗೆ 'ಅತ್ಯುನ್ನತ ಗೌರವ'!