ರಾಮದುರ್ಗಕ್ಕೆ ಅದ್ಧೂರಿ ಎಂಟ್ರಿ ಕೊಟ್ಟ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಯಾತ್ರೆ - ವಿಪಕ್ಷ ನಾಯಕ ಸಿದ್ದರಾಮಯ್ಯ
🎬 Watch Now: Feature Video
ಬೆಳಗಾವಿ: ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹವಾ ಜೋರಾಗಿಯೆ ಸಾಗಿದೆ. ರಾಮದುರ್ಗಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಯಾತ್ರೆಗೆ ಅದ್ದೂರಿ ಸ್ವಾಗತ ದೊರಕಿದೆ. ಅಲ್ಲದೇ, ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ 'ಟಗರು' ಸಾಂಗ್ ಪ್ಲೇ ಆಗಿದ್ದು, ಅಭಿಮಾನಿಗಳತ್ತ ಕೈ ಬೀಸುತ್ತ ಸಿದ್ದರಾಮಯ್ಯ ವೇದಿಕೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ವೇದಿಕೆಗೆ ಆಗಮಿಸಿದ ಮೇಲೆ ಸಿಡಿಮದ್ದು ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ವಿಶೇಷವಾಗಿ ಸಿದ್ದರಾಮಯ್ಯ ಅವರಿಗೆ 1,050 kg ತೂಕದ ಕಬ್ಬು ಹಾಗೂ ಹೂ ಮಿಶ್ರಿತ 1.75 ಲಕ್ಷ ರೂಪಾಯಿ ವೆಚ್ಚ ಮಾಡಿ ಬೃಹದಾಕಾರದ ಹಾರ ಸಿದ್ದಪಡಿಸಿದ್ದರು. ಈ ಯಾತ್ರೆಗೆ ಮಾಜಿ ಶಾಸಕ ಅಶೋಕ ಪಟ್ಟಣ, ಜಮೀರ್ ಅಹಮ್ಮದ್ ಖಾನ್ ಸಾಥ್ ನೀಡಿದ್ದು, ಅದ್ಧೂರಿ ಮೆರವಣಿಗೆ ಮೂಲಕ ಸಮಾವೇಶ ಸ್ಥಳಕ್ಕೆ ಹೊರಟರು.
ಪ್ರಜಾ ಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಪಕ್ಷಕ್ಕೆ ದೀನ ದಲಿತರ, ಬಡವರ, ರೈತರ ಅಭಿವೃದ್ಧಿಕಿಂತ ಇವರಿಗೆ ಭಾವನಾತ್ಮಕ ವಿಷಯಗಳೇ ಮುಖ್ಯ. ಬಿಜೆಪಿ ಸರ್ಕಾರ ಯಾವುದೇ ಜನಪರ ಯೋಜನೆ ಬಗ್ಗೆ ಚರ್ಚೆ ಮಾಡುವುದಿಲ್ಲ, ಅವರಿಗೆ ಭಾವನಾತ್ಮಕ ವಿಷಯ ಇದ್ದರೆ ಸಾಕು, ಈ ಸರ್ಕಾರ ನಿಮಗೆ ಬೇಕಾ ಎಂದು ಜನರನ್ನು ಪ್ರಶ್ನೆ ಮಾಡಿದರು.
ಕಳೆದ ವಾರದ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಮಂಗಳೂರಿಗೆ ಬಂದಾಗ ಅಲ್ಲಿ ಮುಂದಿನ ವಿಷಯ ಅಬ್ಬಕ್ಕ ವರ್ಸಸ್ ಟಿಪ್ಪು ಸುಲ್ತಾನ್ ವಿಷಯನ್ನು ಚರ್ಚೆ ಮಾಡುವಂತೆ ಹೆಳುತ್ತಾರೆ. ಇವರಿಗೆ ಜನರ ಮೂಲಭೂತ ಸೌಕರ್ಯ ನೀರು, ಆರೋಗ್ಯ, ಆಹಾರ ಬೇಕಾಗಿಲ್ಲ ಚುನಾವಣೆಯಲ್ಲಿ ಅಬ್ಬಕ್ಕ ಟಿಪ್ಪು ಸುಲ್ತಾನ್ ವಿಚಾರ ಮುಂದಿಡುವಂತೆ ಸಲಹೆ ಕೊಡುತ್ತಾರೆ ಎಂದು ಕೇಂದ್ರ ಗೃಹ ಸಚಿವರ ವಿರುದ್ಧ ಏಕವಚನದಲ್ಲಿ ಸಿದ್ದರಾಮಯ್ಯನವರು ಹರಿಹಾಯ್ದರು.
ಇದನ್ನೂ ಓದಿ; ಗುಲ್ಮಾರ್ಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಾಸಗಿ ಭೇಟಿ..!