ತುಮಕೂರಿನಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಾಲನೆ ಆರೋಪ: ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು - etv bharat karnataka
🎬 Watch Now: Feature Video
Published : Sep 22, 2023, 6:36 PM IST
ತುಮಕೂರು: ಜಿಲ್ಲೆಯಲ್ಲಿ ಖಾಸಗಿ ಬಸ್ಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಓವರ್ ಸ್ಪೀಡ್ನಲ್ಲಿ ಚಲಿಸುತ್ತಿರುವುದನ್ನು ಮನಗಂಡ ಕೊರಟಗೆರೆ ಪೊಲೀಸರು ಇಂದು ಅಂತಹ ಬಸ್ಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್ಗಳು ಅತಿವೇಗದಲ್ಲಿ ಅಪಘಾತ ಸಂಭವಿಸುವ ರೀತಿ ಸಂಚರಿಸುತ್ತಿದ್ದಾರೆ ಎಂದು ವಾಹನ ಸವಾರರು ಮತ್ತು ಗ್ರಾಮಸ್ಥರು ದೂರಿದ್ದರು. ಹೀಗಾಗಿ ಕೊರಟಗೆರೆ ಸಬ್ಇನ್ಸ್ಪೆಕ್ಟರ್ ಚೇತನ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಇಂದು ಅಂತಹ ಬಸ್ಗಳನ್ನು ಗುರುತಿಸಿ ದಂಡ ವಿಧಿಸಿ ಪ್ರಕರಣವನ್ನೂ ದಾಖಲಿಸಿಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ.
ಈ ಮೂಲಕ ಖಾಸಗಿ ಬಸ್ಗಳ ಓವರ್ ಲೋಡು ಮತ್ತು ಓವರ್ ಸ್ಪೀಡ್ಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಬೆಳಗ್ಗೆಯಿಂದಲ್ಲೇ ರಸ್ತೆಗಿಳಿದ ಕೊರಟಗೆರೆ ಪೊಲೀಸರು
ತುಮಕೂರು- ಗೌರಿಬಿದನೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಗಳನ್ನು ಅಡ್ಡಹಾಕಿ, ಪರಿಶೀಲನೆ ನಡೆಸಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಒತ್ತು ಸಾಗುತ್ತಿದ್ದ ಬಸ್ಗಳ ಮಾಲೀಕರಿಗೆ ಸಬ್ಇನ್ಸ್ಪೆಕ್ಟರ್ ದಂಡ ವಿಧಿಸಿದರು. ಅಲ್ಲದೇ, ಮಾಲೀಕರ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಸಲಾಗಿದೆ.
ಇದನ್ನೂ ಓದಿ: ತುಮಕೂರು: ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್.. ಪೊಲೀಸರಿಂದ ಬಂಧನ