ಪುತ್ತೂರು: ಸಿಡಿಲಿನಿಂದ ಶಾರ್ಟ್ ಸರ್ಕ್ಯೂಟ್, ಫೋಟೋ ಸ್ಟುಡಿಯೋಗೆ ಹಾನಿ
🎬 Watch Now: Feature Video
Published : Oct 17, 2023, 8:09 PM IST
ಪುತ್ತೂರು (ದಕ್ಷಿಣ ಕನ್ನಡ) : ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಫೋಟೊ ಸ್ಟುಡಿಯೋ ಸುಟ್ಟು ಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ನಗರದ ಹೃದಯ ಭಾಗದಲ್ಲಿನ ಜಿ.ಎಲ್.ಕಾಂಪ್ಲೆಕ್ಸ್ನಲ್ಲಿರುವ ಫೋಟೊ ಸ್ಟುಡಿಯೋ ನಾಶವಾಗಿದೆ.
ಪೊನ್ನಪ್ಪ ಎಂಬವರಿಗೆ ಈ ಅಡ್ಲ್ಯಾಬ್ ಸ್ಟುಡಿಯೋ ಸೇರಿದ್ದು, ಸುಮಾರು 6 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸಿಡಿಲು ಬಡಿದು ಘಟನೆ ನಡೆದರೂ ಸ್ಥಳದಲ್ಲೇ ಇದ್ದ ಸಿಬ್ಬಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಟುಡಿಯೋದಲ್ಲಿದ್ದ
ಕಂಪ್ಯೂಟರ್ ಸಿಸ್ಟಂ, ಫೋಟೊ ಮಷಿನರಿ, ಪ್ಯಾನ್, ಫೋಟೊ ಆಲ್ಬಮ್ ಸೇರಿದಂತೆ ಇನ್ನಿತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಹಕರಿಗೆ ನೀಡಬೇಕಾಗಿದ್ದ ಹಲವು ಶುಭ ಸಮಾರಂಭಗಳ ಫೋಟೋ ಆಲ್ಬಮ್ಸುಟ್ಟು ಹೋಗಿವೆ ಎಂದು ಮಾಲೀಕರು ಅಳಲು ತೊಡಿಕೊಂಡರು.
ಇದನ್ನೂ ಓದಿ: ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ : ಕೆಟ್ಟು ನಿಂತಿದ್ದ ಲಾರಿಗೆ ವಾಹನಗಳು ಡಿಕ್ಕಿ.. ಎರಡು ಗಂಟೆ ಸಂಚಾರ ವ್ಯತ್ಯಯ