ಸಿಂಹಗಳನ್ನು ಹರಾಜು ಹಾಕಲು ಸಿದ್ಧವಾದ ಪಾಕ್ ಮೃಗಾಲಯ: ಕಾರಣ!? - ಈಟಿವಿ ಭಾರತ ಕನ್ನಡ
🎬 Watch Now: Feature Video
ಲಾಹೋರ್ (ಪಾಕಿಸ್ತಾನ): ಸಿಂಹಗಳು ಹೆಚ್ಚಾಗುತ್ತಿದ್ದು, ಸ್ಥಳಾವಕಾಶದ ಕೊರತೆಯಿಂದ ಪಾಕಿಸ್ತಾನದ ಮೃಗಾಲಯವು ಮುಂದಿನ ವಾರ ಒಂದು ಡಜನ್ ಸಿಂಹಗಳನ್ನು ಖಾಸಗಿ ಸಂಗ್ರಾಹಕರಿಗೆ ಹರಾಜು ಮಾಡಲು ಮುಂದಾಗಿದೆ. ಲಾಹೋರ್ ಸಫಾರಿ ಮೃಗಾಲಯವು ಈಗ ಹಲವಾರು ಸಿಂಹಗಳನ್ನು ಹೊಂದಿದೆ. ಹೆಚ್ಚಿನ ಸ್ಥಳವನ್ನು ಮುಕ್ತಗೊಳಿಸುವುದು ಮಾತ್ರವಲ್ಲದೆ, ಆಹಾರಕ್ಕಾಗಿ ಮಾಡುವ ನಮ್ಮ ವೆಚ್ಚವೂ ಕಡಿಮೆಯಾಗುತ್ತದೆ ಎಂದು ಅಲ್ಲಿನ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ. ಮೃಗಾಲಯವು ಪ್ರಸ್ತುತ 29 ಸಿಂಹಗಳಿಗೆ ನೆಲೆಯಾಗಿದೆ ಮತ್ತು ಅಧಿಕಾರಿಗಳು ಎರಡರಿಂದ ಐದು ವರ್ಷ ವಯಸ್ಸಿನ 12 ಸಿಂಹಗಳನ್ನು ಮಾರಾಟ ಮಾಡಲು ಆಗಸ್ಟ್ 11 ರಂದು ಹರಾಜು ಮಾಡಲು ಯೋಜಿಸಿದ್ದಾರೆ.
Last Updated : Feb 3, 2023, 8:26 PM IST