ಅಬ್ಬಾ... ಈ ಕೋಳಿಯ ಬೆಲೆ ಕೇಳಿದರೆ ನೀವೂ ಬೆಚ್ಚುತ್ತೀರಿ..!
🎬 Watch Now: Feature Video
Published : Dec 12, 2023, 10:05 PM IST
ಮಯೂರ್‌ಭಂಜ್ (ಒಡಿಶಾ): ಸಾಮಾನ್ಯವಾಗಿ ಕೋಳಿಯ ಬೆಲೆ ಮಾರುಕಟ್ಟೆಯಲ್ಲಿ 500ರೂ ಒಳಗೆ ಇರುವುದನ್ನು ಕೇಳಿದ್ದೇವೆ, ಮಾಂಸ ಒಂದು ಕಿಲೋಕ್ಕೆ 250 ರಿಂದ 300 ಇರುತ್ತದೆ. ಆದರೆ, ಒಡಿಶಾದಲ್ಲಿ ಕೋಳಿಯ ಬೆಲೆ ಕೇಳಿದವರು ಅಚ್ಚರಿಗೆ ಒಳಗಾಗುವುದಂತೂ ಖಂಡಿತ. ಏಕೆಂದರೆ ಇಲ್ಲಿನ ಕೋಳಿಗಳಿಗೆ ಮಾರುಕಟ್ಟೆಯಲ್ಲಿ 1000 ದಿಂದ 30 ಸಾವಿರ ವರೆಗೆ ಬೆಲೆ ಇದೆ.
ಅರೆ.. ಈ ಕೋಳಿಯಲ್ಲಿ ಅಂತಹದ್ದೇನು ವಿಶೇಷ ಎಂದು ಕೇಳಬಹುದು, ಅದಕ್ಕೂ ಕಾರಣಗಳಿವೆ. ಕರಾವಳಿ ಕರ್ನಾಟಕದಲ್ಲಿ ಕೋಳಿ ಕಟ್ಟ ಎಂಬ ಕಾಳಗವನ್ನು ನಾವು ಕಾಣುತ್ತೇವೆ. ಅದೇ ರೀತಿ ಒಡಿಶಾದಲ್ಲೂ ಕೋಳಿ ಕಾಳಗ ನಡೆಯುತ್ತದೆ. ಇದಕ್ಕಾ ಮಯೂರ್‌ಭಂಜ್ ಜಿಲ್ಲೆಯ ಕೋಳಿಗಳನ್ನೇ ಜನ ಕೇಳುತ್ತಾರೆ. ಹೀಗಾಗಿ ಈ ಕೋಳಿಗಳ ಬೆಲೆ ಹೆಚ್ಚಾಗಿದೆ. ಪ್ರತಿ ಚಳಿಗಾಲದ ಸಮಯದಲ್ಲಿ ಈ ಸ್ಪರ್ಧೆಯ ಕಾರಣ ಕೋಳಿಗಳ ಬೆಲೆ ದುಪ್ಪಟು ಆಗುತ್ತದೆ.
ಹಳ್ಳಿಯಲ್ಲಿ ಬೆಳೆದ ನಾಟಿ ಕೋಳಿಗಾಗಳಾದ ಕಾರಣ ಇವುಗಳ ಮಾಂಸಕ್ಕೂ ಬೆಲೆ ಹೆಚ್ಚಿದೆ. ಫಾರಂ ಕೋಳಿಯ ಮಾಂಸಕ್ಕೆ ಹೋಲಿಸಿದರೆ, 300 ರಿಂದ 400 ರೂ.ಗಳ ಅಂತರವನ್ನು ಕಾಣಬಹುದು. ಅಂದರೆ ಒಂದು ಕೇಜಿಗೆ 600 ರಿಂದ 1800 ರೂ. ವರಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಯೂರೋಪ್ನಿಂದ ಭಾರತಕ್ಕೆ ಬಂದ ಎರಡು ಸೈಬೀರಿಯನ್ ಹುಲಿಗಳು