ಜು.30 ರಂದು ಅಸ್ಸೋಂ ನೂತನ ವಿಧಾನಸಭೆ ಕಟ್ಟಡ ಉದ್ಘಾಟನೆ: ವಿಹಂಗಮ ನೋಟ ನೀವೂ ಒಮ್ಮೆ ನೋಡಿ! - ಲೋಕಸಭಾ ಸ್ಪೀಕರ್ ಓಂ ಬಿರ್ಲಾ

🎬 Watch Now: Feature Video

thumbnail

By

Published : Jul 28, 2023, 6:12 PM IST

ಗುವಾಹಟಿ(ಅಸ್ಸೋಂ): Assam Assembly Building: 12 ವರ್ಷಗಳ ಸುದೀರ್ಘ ಕಾಮಗಾರಿಯ ಬಳಿಕ ಅಸ್ಸೋಂ ವಿಧಾನಸಭೆಯ ನೂತನ ಕಟ್ಟಡ ಜು.30 ರಂದು ಲೋಕಾರ್ಪಣೆಗೊಳ್ಳಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಹಾಗೂ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸ್ಸೋಂ ಅಸೆಂಬ್ಲಿಯು 50 ವರ್ಷಗಳ ಕಾಲ ಹೆಮ್ಮೆಯಿಂದ ನಿಂತಿರುವ ತನ್ನ ಹಳೆಯ ವಿಳಾಸಕ್ಕೆ ವಿದಾಯ ಹೇಳುತ್ತಿದ್ದಂತೆ ಈ ಐತಿಹಾಸಿಕ ಸಂದರ್ಭವು ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ.  

ಬರೋಬ್ಬರಿ 351 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡವು ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದೆ. ಭವಿಷ್ಯದಲ್ಲಿ ವಿಧಾನಸಭಾ ಸ್ಥಾನಗಳ ವಿಸ್ತರಣೆಯ ಸಾಧ್ಯತೆ  ಗಮನದಲ್ಲಿಟ್ಟುಕೊಂಡು ಸೀಟುಗಳ ಸಂಖ್ಯೆಯನ್ನು 186ಕ್ಕೆ ಹೆಚ್ಚಿಸಲಾಗಿದೆ. ಕಟ್ಟಡವನ್ನು ವೃಂದಾಬನಿ ವಸ್ತ್ರದ ಮಾದರಿಯಲ್ಲಿ ಸುಂದರವಾಗಿ ಅಲಂಕರಿಸಲಾಗಿದ್ದು, ಇದು ವಾಸ್ತುಶಿಲ್ಪಕ್ಕೆ ಸಾಂಸ್ಕೃತಿಕ ಮಹತ್ವ ನೀಡುತ್ತದೆ.

ಉದ್ದೇಶವೇನು?: ಈ ಹೊಸ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಪ್ರಾಥಮಿಕ ಉದ್ದೇಶವೆಂದರೆ ಇ - ಆಡಳಿತವನ್ನು ಉತ್ತೇಜಿಸುವುದು. ಇದರ ಪರಿಣಾಮವಾಗಿ, ವಿಧಾನಸಭೆಯು ಶಾಸಕಾಂಗ ಕಲಾಪಗಳನ್ನು ಸುಗಮಗೊಳಿಸಲು ಮತ್ತು ದಕ್ಷತೆ ಸುಧಾರಿಸಲು ಇ - ವಿಧಾನಸಭಾ ವ್ಯವಸ್ಥೆ  ಜಾರಿಗೆ ತರಲಿದೆ.

12 ವರ್ಷಗಳ ಸುದೀರ್ಘ ಕಾಮಗಾರಿ: 2011ರಲ್ಲಿ ಅಸ್ಸೋಂ ವಿಧಾನಸಭೆಯ ನೂತನ ಕಟ್ಟಡದ ನಿರ್ಮಾಣದ ಪಯಣ ಆರಂಭವಾಯಿತು. ಸರ್ಬಾನಂದ ಸೋನೋವಾಲ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಟ್ಟಡ ಬಹುತೇಕ ಪೂರ್ಣಗೊಂಡಿದ್ದರೂ, ಕೆಲವು ತಾಂತ್ರಿಕ ಸಮಸ್ಯೆಗಳಿಂದ ತಾತ್ಕಾಲಿಕವಾಗಿ ಹಳೆಯ ಕಟ್ಟಡದಲ್ಲಿ ಮತ್ತೆ ಅಧಿವೇಶನ ನಡೆಸುವಂತಾಯಿತು. ಆದಾಗ್ಯೂ, ಈ ಅಡೆತಡೆ ನಿವಾರಿಸಿ ಅಂತಿಮವಾಗಿ ಭವ್ಯವಾದ ಮತ್ತು ಕ್ರಿಯಾತ್ಮಕ ಬಹುಮಹಡಿ ಕಟ್ಟಡ ನಿರ್ಮಾಣಗೊಂಡಿದೆ. ವಿಧಾನಸಭೆಯ ಮುಂಬರುವ ಅಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಎಲ್ಲ ಸಚಿವರು, ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಪರಿಷತ್ತಿನ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಸದಸ್ಯರು, ಜಿಲ್ಲಾ ಪರಿಷತ್ ಸದಸ್ಯರು ಸಾಕ್ಷಿಯಾಗುವ ನಿರೀಕ್ಷೆಯಿದೆ. ಅಸ್ಸೋಂ ಅಸೆಂಬ್ಲಿಯು ತನ್ನ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಂಡು ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೊಸ ಯುಗವನ್ನು ಪ್ರಾರಂಭಿಸಲು ಈಗ ಸಜ್ಜಾಗಿದೆ.

ಇದನ್ನೂ ಓದಿ: ಹೊಸ ಸಂಸತ್‌ ಭವನ ಹೇಗಿದೆ ಗೊತ್ತಾ? ವಿಡಿಯೋ ನೋಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.