ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನಕ್ಕೆ ಅಪರೂಪದ ಅತಿಥಿಗಳ ಆಗಮನ - ವಿಡಿಯೋ

🎬 Watch Now: Feature Video

thumbnail

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಅಪರೂಪದ ಅತಿಥಿಗಳಾದ ತೋಳ, ಅಳಿಲು ಮಂಗ, ಬ್ಲೂ ಗೋಲ್ಡ್ ಮಕಾವ್, ಗಾಲಾ, ಟುರಾಕೋ, ಮಾರ್ಮಸಟ್, ಡಾಮರಿಂನ್​ಗಳ ಆಗಮನವಾಗಿದೆ. ಅಳಿವಿನಂಚಿನಲ್ಲಿರುವ ಒಂದು ಜೊತೆ ತೋಳಗಳನ್ನು ಪ್ರಾಣಿ ವಿನಿಮಯ ಯೋಜನೆಯಲ್ಲಿ ಆಂಧ್ರದ ವಿಶಾಖಪಟ್ಟಣದ ಮೃಗಾಲಯದಿಂದ ಪಿಲಿಕುಳ ಜೈವಿಕ ಉದ್ಯಾನಕ್ಕೆ ತರಿಸಲಾಗಿದೆ. ಹೊಸ ಜಗತ್ತಿನ ಮಂಗಗಳೆಂದು ಕರೆಯಲ್ಪಡುವ 4 ಜೊತೆ ಅಳಿಲು ಮಂಗ, ಮಾರ್ಮಸಟ್, ಡಾಮರಿಂನ್​ಗಳು ಆಗಮಿಸಿವೆ. ಇವು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಚಿಕ್ಕ ಜಾತಿಯ ಮಂಗಗಳಾಗಿವೆ. ಅಲ್ಲದೆ ಮೆಕ್ಸಿಕೋ ದೇಶದಲ್ಲಿ ಕಂಡು ಬರುವ ಬ್ಲೂ ಗೋಲ್ಡ್ ಮಕಾವ್, ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಗಾಲಾ, ದಕ್ಷಿಣ ಆಫ್ರಿಕಾ ಖಂಡದಲ್ಲಿ ಕಾಣ ಸಿಗುವ ಟುರಾಕೋಗಳನ್ನು ಪಿಲಿಕುಳಕ್ಕೆ ತರಿಸಲಾಗಿದೆ.

ಹೊಸದಾಗಿ ಆಗಮಿಸಿರುವ ಪ್ರಾಣಿ ಪಕ್ಷಿಗಳ ಆವರಣಗಳ ಸಮುಚ್ಚಯ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆಯನ್ನು ರಿಲಯನ್ಸ್ ಫೌಂಡೇಶನ್‌ ನೀಡಿದೆ. ಈ ಪ್ರಾಣಿ-ಪಕ್ಷಿಗಳಿಗೆ ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಹೋಲುವ ಆವರಣಗಳನ್ನು ರಚಿಸಲಾಗಿದೆ. ಆವರಣದೊಳಗೆ ಪ್ರಾಣಿಗಳಿಗಾಗಿ, ಆಹಾರ ನೀಡುವ ಕೇಂದ್ರ, ಬೀಡಿಂಗ್​ ಬಾಕ್ಸ್, ಇತ್ಯಾದಿ ಸಲಕರಣೆಗಳನ್ನು ಉಚಿತವಾಗಿ ಬೆಂಗಳೂರಿನ ಲೈಫ್ ಸೈನ್ಸ್ ಎಜುಕೇಶನ್ ಟ್ರಸ್ಟ್ ಒದಗಿಸಿದ್ದಾರೆ. ಈಗಾಗಲೇ ಪಿಲಿಕುಳ ಮೃಗಾಲಯದಲ್ಲಿ 1,200 ರಷ್ಟು ವಿವಿಧ ಜಾತಿಯ ಪ್ರಾಣಿ ಪಕ್ಷಿ ಉರಗಗಳಿದೆ.

ಇದನ್ನೂ ಓದಿ: Pilikula Zoo: ಸಂತಾನೋತ್ಪತ್ತಿಯಲ್ಲಿ ದೇಶದಲ್ಲಿಯೇ ಟಾಪ್ 1 ಮಂಗಳೂರು ಪಿಲಿಕುಳ ಮೃಗಾಲಯ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.