ಹಮ್ಮು ಬಿಮ್ಮಿಲ್ಲದ ಪ್ರಧಾನಿ: ಸರಳತೆಯಿಂದ ಮನಸೆಳೆದ ಮೋದಿ

🎬 Watch Now: Feature Video

thumbnail

By

Published : May 3, 2023, 11:08 PM IST

Updated : May 4, 2023, 9:11 AM IST

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆಗೆ ಮತಬೇಟೆ ಜೋರಾಗಿದೆ. ಪಕ್ಷಗಳ ನಾಯಕರು ಮತದಾರರ ಸೆಳೆಯಲು ಸರ್ವ ಕಸರತ್ತು ಮಾಡ್ತಿದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯಾದ್ಯಂತ ಓಡಾಡಿ ಮತಬೇಟೆಯಾಡ್ತಿದಾರೆ. ಮೈಸೂರಿನಲ್ಲಿ ಜಂಬೂ ಸವಾರಿ ಮಾದರಿ ರೋಡ್​ ಶೋ ನಡೆಸಿದ್ದ ಪ್ರಧಾನಿ, ಕಲಬುರಗಿಯಲ್ಲಿ ಮಕ್ಕಳ ಜೊತೆಗೆ ಹರಟೆ ನಡೆಸಿದ್ದು, ಅವರ ಸರಳತೆಯ ದ್ಯೋತಕವಾಗಿತ್ತು.

ಪಕ್ಷದ ಪರ ಪ್ರಚಾರಕ್ಕೆಂದು ಮಂಗಳವಾರ ಕಲಬುರಗಿಗೆ ಬಂದಿದ್ದ ಪ್ರಧಾನಿ ಮೋದಿ ಎರಡು ಕಾರಣಗಳಿಗಾಗಿ ಗಮನ ಸೆಳೆದರು. ಹೆಲಿಪ್ಯಾಡ್​ನಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅಕ್ಕರೆಯಿಂದ ಮಾತನಾಡಿಸಿದರೆ, ಸ್ವಾಗತಕ್ಕೆ ಬಂದಿದ್ದ ಹಿರಿಯ ಕಾರ್ಯಕರ್ತರ ಊರುಗೋಲು‌ ನೆಲಕ್ಕೆ ಬಿದ್ದಾಗ ಖುದ್ದು ಅವರೇ ಅದನ್ನು ತೆಗೆದುಕೊಟ್ಟು ಸರಳತೆ ಮೆರೆದ್ರು. 

ನೆಲಕ್ಕೆ ಬಿದ್ದ ಊರುಗೋಲನ್ನು ಎತ್ತಿಕೊಟ್ಟ ಮೋದಿ: ನಗರದ ಡಿಎಆರ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿದ ಪ್ರಧಾನಿಯನ್ನು ಸ್ವಾಗತಿಸೋಕೆ ಮಹಾಪೌರ ವಿಶಾಲ ದರ್ಗಿ, ಬಿಜೆಪಿ ಹಿರಿಯ ಕಾರ್ಯಕರ್ತ ವಿಜಯಕುಮಾರ್​ ಸೇವಲಾನಿ ಅಲ್ಲಿದ್ದರು. ಮೋದಿ ಕಾಪ್ಟರ್​ನಿಂದ ಕೆಳಗಿಳಿದು ಬಂದಾಗ ಸ್ವಾಗತಿಸುವ ವೇಳೆ ಸೇವಲಾನಿ‌ ಅವರ ಕೈಯಲ್ಲಿದ್ದ ಊರುಗೋಲು ನೆಲಕ್ಕೆ ಬಿತ್ತು. ನೆಲಕ್ಕೆ ಬಿದ್ದ ಊರುಗೋಲನ್ನು ಸ್ವತಃ ಮೋದಿ ಅವರೇ ಎತ್ತಿಕೊಟ್ಟರು.

ಪಕ್ಕದಲ್ಲಿದ್ದ ಮೇಯರ್ ದರ್ಗಿ ಅವರು ಊರುಗೋಲನ್ನು ತೆಗೆದುಕೊಳ್ಳಲು ಮುಂದಾದರೂ, ಪ್ರಧಾನಿಯೇ ಅದನ್ನು ಎತ್ತಿಕೊಂಡರು. ಪಕ್ಷದ ಹಿರಿಯ ಕಾರ್ಯಕರ್ತನಿಗೆ ಅದನ್ನು ನೀಡಿ ಆರೋಗ್ಯವನ್ನೂ ವಿಚಾರಿಸಿದ್ರು. ಮೋದಿ ಅವರ ಈ ಸರಳತೆ ಅಲ್ಲಿದ್ದವರನ್ನು ಸೆಳೆಯಿತು. ಇದಲ್ಲದೇ, ಮೋದಿ ಅವರ ಇನ್ನೊಂದು ನಡೆಯೂ ಜನರನ್ನು ಆಕರ್ಷಿಸಿತು. ಭದ್ರತಾ ಕಾರಣಕ್ಕಾಗಿ ಹೆಲಿಪ್ಯಾಡ್​ನಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಜನರು ಅದೇ ಮಾರ್ಗದಲ್ಲಿ ಬರುವ ಪ್ರಧಾನಿಯನ್ನು ಕಾಣಲು ಕಾದಿದ್ದರು. ವಿಶ್ವನಾಯಕನನ್ನು ನೋಡುವ ಬಯಕೆ ಹೊಂದಿದ್ದ ಮಕ್ಕಳ ಗುಂಪೊಂದು ಅಲ್ಲಿ ಜಮಾಯಿಸಿತ್ತು. ರಸ್ತೆ ಮಾರ್ಗವಾಗಿ ಹೊರಟಿದ್ದ ಮೋದಿ ಇವರನ್ನು ಕಂಡು ಕಾರು ನಿಲ್ಲಿಸಿ ಅವರಿದ್ದಲ್ಲಿಗೆ ತೆರಳಿದ್ರು.

ಪುಟಾಣಿಗಳ ಜೊತೆ ಬೆರೆತ ಪ್ರಧಾನಿ : ಭದ್ರತೆಯನ್ನೂ ಲೆಕ್ಕಿಸದೇ ಮೋದಿ, ಪುಟಾಣಿಗಳ ಜೊತೆ ಬೆರೆತರು. ಅವರೊಂದಿಗೆ ಹರಟುತ್ತಾ ಕೆಲ ಯೋಗ ಮಾದರಿಗಳನ್ನು ಹೇಳಿಕೊಟ್ರು. ಬಳಿಕ ಅವರ ಭವಿಷ್ಯದ ಕನಸಿನ ಬಗ್ಗೆಯೂ ತಿಳಿದುಕೊಂಡ್ರು. ಮಕ್ಕಳಲ್ಲಿ ಕೆಲವರು ಡಾಕ್ಟರ್​, ಪೊಲೀಸ್, ಎಂಜಿನಿಯರ್​ ಆಗ್ತೀನಿ ಅಂದ್ರು. ಇನ್ನೊಬ್ಬ ಕಾರ್ಯದರ್ಶಿ ಆಗುವೆ ಅಂದಾಗ, ಯಾಕೆ ಪ್ರಧಾನಿಯೇ ಆಗು ಎಂದು ಹರಸಿದ್ರು. ಪ್ರಧಾನಿ ಸಾಮೀಪ್ಯದ ಮಾತುಕತೆಯಿಂದ ಮಕ್ಕಳು ಪುಳಕಿತರಾದರು.

ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ, ತುಳಸಿ ಗೌಡರಿಂದ ಆಶೀರ್ವಾದ ಪಡೆದ ಪ್ರಧಾನಿ ಮೋದಿ

Last Updated : May 4, 2023, 9:11 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.