'ನಿಷ್ಠೆಯಿಂದಿರುವ ನಾಯಕನಿಗೆ ರಾಜ್ಯದ ಪಟ್ಟ': ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ ನುಡಿ - ನಿಷ್ಠೆಯಿಂದಿರುವ ನಾಯಕನಿಗೆ ರಾಜ್ಯದ ಪಟ್ಟ
🎬 Watch Now: Feature Video
ವಿಜಯನಗರ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಜರುಗಿದ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ 14 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ 'ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್' ಎಂದು ವರ್ಷದ ಕಾರ್ಣಿಕ ಭವಿಷ್ಯ ನುಡಿದರು. ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಡೆಂಕಣಮರಡಿಯಲ್ಲಿ ಗೊರವಯ್ಯ ರಾಮಪ್ಪ ನುಡಿದ ಕಾರ್ಣಿಕ ಭವಿಷ್ಯದ ಕುರಿತು ವಿಶ್ಲೇಷಣೆ ಮಾಡಿದರು.
"ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎಂದು ಭಗವಂತ ದೈವವಾಣಿ ಮೂಲಕ ತಿಳಿಸಿದ್ದಾನೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ ಸಿಗಲಿದೆ" ಎಂದು ಅವರು ಹೇಳಿದರು. ರೈತಾಪಿ ವರ್ಗದ ಮೇಲೆ ವಿಶ್ಲೇಷಣೆ ಮಾಡಿರುವ ಅವರು, "ಈ ವರ್ಷ ನಾಡಿನಲ್ಲಿ ಮಳೆ ಜಾಸ್ತಿಯಾಗಿ ಸಮೃದ್ಧ ಬೆಳೆ ರೈತರ ಪಾಲಿಗೆ ಸಿಗಲಿದೆ. ಮಳೆ ಜಾಸ್ತಿಯಾಗಿ ಬೆಳೆ ಹಾನಿಯೂ ಆಗುತ್ತದೆ. ಆದರೆ ಬೆಳೆದ ಬೆಳೆ ಸಿಗುತ್ತದೆ ಎನ್ನುವ ಸೂಚನೆಯನ್ನು ದೈವದ ನುಡಿ ನೀಡಿದೆ" ಎಂದರು.
ಇದನ್ನೂ ಓದಿ: ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ: 'ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್’ ಎಂದ ದೈವವಾಣಿ.. ಏನಿದು ಭವಿಷ್ಯ!