ದಾವಣಗೆರೆಯಲ್ಲಿ ಕೇಜ್ರಿವಾಲ್ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ: ಮುಖ್ಯಮಂತ್ರಿ ಚಂದ್ರು - Aam Aadmi Party meeting
🎬 Watch Now: Feature Video
ದಾವಣಗೆರೆ : ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು, ದೆಹಲಿ ಹಾಗೂ ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವಾಗಿದೆ. ನಾಳೆ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ದಾವಣಗೆರೆಗೆ ಆಗಮಿಸುತ್ತಿದ್ದು, ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ ಎಂದು ಆಪ್ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದರು.
ಈ ಕುರಿತು ಮಾತನಾಡಿದ ಅವರು, ಪಂಜಾಬ್, ದೆಹಲಿ ನಂತರ ಕರ್ನಾಟಕದತ್ತ ಕೇಜ್ರಿವಾಲ್ ಅವರು ಮುಖ ಮಾಡಿದ್ದಾರೆ. ನಾಳೆ ದಾವಣಗೆರೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗಮಿಸುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಕಿಚ್ಚು ಹಚ್ಚಲಿದ್ದಾರೆ. ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಇನ್ನು ಈ ಬಹಿರಂಗ ಸಭೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಆಗಮಿಸುತ್ತಿದ್ದು, ಅರವಿಂದ ಕೇಜ್ರಿವಾಲ್ಗೆ ಸಾತ್ ನೀಡಲಿದ್ದಾರೆ ಎಂದರು.
ನಾಳೆ ಮಧ್ಯಾಹ್ನ ನಾಲ್ಕು ಗಂಟೆಗೆ ಆರಂಭ ಆಗಲಿರುವ ಆಮ್ ಆದ್ಮಿ ಬಹಿರಂಗ ಸಭೆಯಲ್ಲಿ ಸಾಕಷ್ಟು ಜನ ಸೇರುವ ಸಂಬವ ದಟ್ಟವಾಗಿದೆ. ಇನ್ನು ಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅದೃಷ್ಟದ ನೆಲ ಎಂದೇ ಪ್ರಸಿದ್ಧಿ ಪಡೆದ ದಾವಣಗೆರೆಯಿಂದ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ಆಮ್ ಆದ್ಮಿ ಪಕ್ಷ ಪ್ಲಾನ್ ಮಾಡಿದೆ. ಇದಲ್ಲದೇ ಆಮ್ ಆದ್ಮಿ ಪಕ್ಷದ ಬಹಿರಂಗ ಸಮಾವೇಶಕ್ಕೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಪೂರ್ವ ಸಿದ್ಧತೆಗಳು ಆರಂಭವಾಗಿದ್ದು, ಜನ ಸೇರುವುದು ದಟ್ಟವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿ ನಾಯಕರು ರಾಜ್ಯಕ್ಕೆ ಬಂದು ಹೋಗುವುದು ಸೂಟ್ಕೇಸ್ ತೆಗೆದುಕೊಂಡು ಹೋಗೋದಕ್ಕಾ?: ಹೆಚ್ಡಿಕೆ ಪ್ರಶ್ನೆ