ಮಹಿಳೆಯನ್ನು ಬೀದಿಗೆಳೆದು ಥಳಿಸಿದ ತಾಯಿ ಮಗಳು.. ವಿಡಿಯೋ ವೈರಲ್ - ಥಳಿಸುತ್ತಿರುವ ವೀಡಿಯೋ
🎬 Watch Now: Feature Video
ಕಾನ್ಪುರದಲ್ಲಿ ಮಹಿಳೆಯೊಬ್ಬರಿಗೆ ತಾಯಿ ಹಾಗೂ ಮಗಳು ಸೇರಿ ಥಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಬಿಲಹೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತರಪುರದ ಔಟ್‌ಪೋಸ್ಟ್‌ನ ಐಮಾ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಡಿಯೋದಲ್ಲಿ, ತಾಯಿ ಮತ್ತು ಮಗಳು ಮಹಿಳೆಯ ತಲೆಗೂದಲು ಹಿಡಿದು ಥಳಿಸಿ ಮನೆಯಿಂದ ರಸ್ತೆಗೆ ಎಳೆದೊಯ್ಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಯ ತನಿಖೆಯನ್ನು ಇನ್ಸ್‌ಪೆಕ್ಟರ್ ಅತುಲ್ ಕುಮಾರ್ ಯಾದವ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಉತ್ತರಪುರದ ಹೊರಠಾಣೆ ಪ್ರಭಾರಿ ಪವನ್ ದುಬೆ ಹೇಳಿದ್ದಾರೆ.
Last Updated : Feb 3, 2023, 8:28 PM IST