ಆಸನಕ್ಕಾಗಿ ರೈಲಿನಲ್ಲಿ ಗಲಾಟೆ : ಚೈನ್ ಎಳೆದು ರೈಲು ನಿಲ್ಲಿಸಿ ಪೊಲೀಸ್ ಮೇಲೆ ಮೂವರಿಂದ ಹಲ್ಲೆ - ETV Bharath Karnataka
🎬 Watch Now: Feature Video
ಮೊರೆನಾ (ಮಧ್ಯಪ್ರದೇಶ): ರೈಲಿನಲ್ಲಿ ಆಸನಕ್ಕಾಗಿ ನಡೆದ ಗಲಾಟೆ ತಾರಕಕ್ಕೇರಿ ಮೊರೆನಾ ರೈಲ್ವೆ ಜಂಕ್ಷನ್‌ನಲ್ಲಿ ಚೈನ್ ಎಳೆದು ನಿಲ್ಲಿಸಿ ಹಲ್ಲೆ ಮಾಡಿದ ಪ್ರಕರಣ ನಡೆದಿದೆ. ಅಮೃತಸರ-ದಾದರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ಥಾನದ ಪೊಲೀಸ್ ವ್ಯಕ್ತಿಯೊಂದಿಗೆ ಸಾರ್ವಜನಿಕರು ಆಸನಕ್ಕಾಗಿ ಗಲಾಟೆ ಮಾಡಿದ್ದಾರೆ. ಈ ಗಲಾಟೆ ತೀವ್ರವಾದಾಗ ಸ್ಟೇಷನ್ನಲ್ಲಿ ರೈಲನ್ನು ಚೈನ್ ಎಳೆದು ನಿಲ್ಲಿಸಿ ಮೂವರು ಸೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ತಿಳಿದು ಬಂದಿರುವ ಮಾಹಿತಿಯಂತೆ, ಸಂಚರಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕರ ನಡುವೆ ಗಲಾಟೆ ಆರಂಭವಾಗಿದೆ. ಇದು ತಾರಕಕ್ಕೇರಿದ್ದು, ಹಲ್ಲೆಗೆ ಮುಂದಾಗಿದ್ದಾರೆ. ಮೊರೆನಾ ರೈಲ್ವೆ ಜಂಕ್ಷನ್‌ನಲ್ಲಿ ಚೈನ್ ಎಳೆದು ರೈಲು ನಿಲ್ಲಿಸಿ ರಾಜಸ್ಥಾನದ ಪೊಲೀಸ್ ವ್ಯಕ್ತಿಯನ್ನು ರೈಲ್ನಿಂದ ಕೆಳಗಿಳಿಸಲಾಗಿದೆ. ಆ ಬಳಿಕ ಸುಮಾರು 15 ನಿಮಿಷಗಳ ಕಾಲ ಗಲಾಟೆ ನಡೆದಿದೆ.
ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ರೈಲ್ವೆ ಸ್ಟೇಷನ್ನಲ್ಲಿದ್ದ ವ್ಯಕ್ತಿ ವಿಡಿಯೋ ಮಾಡಿದ್ದು ಇದು ವೈರಲ್ ಆಗಿದೆ. ಸುಮಾರು 15 ನಿಮಿಷಗಳ ಕಾಲ ಅಮೃತಸರ - ದಾದರ್ ರೈಲನ್ನು ಚೈನ್ ಎಳೆದು ನಿಲ್ಲಿಸಲಾಗಿತ್ತು. ರೈಲಿನಿಂದ ಇಳಿದ ಮೂವರು ಹಲ್ಲೆ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ದೃಶ್ಯವನ್ನು ಆಧರಿಸಿ ರೈಲ್ವೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ರಾಜಸ್ಥಾನ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ.
ಇದನ್ನೂ ಓದಿ: ತಂದೆ ಮಗಳು ಸಜೀವ ದಹನ: ಮನಕಲಕುವ ದಾರುಣ ಘಟನೆ..!