ಮೋರ್ಬಿ ಸೇತುವೆ ಕುಸಿತ ಪ್ರಕರಣ.. ಭಾಷಣದ ವೇಳೆ ಭಾವುಕರಾದ ಪ್ರಧಾನಿ ಮೋದಿ - ಮೋರ್ಬಿ ಸೇತುವೆ ಕುಸಿತ ಪ್ರಕರಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16793960-thumbnail-3x2-news.jpg)
ಬನಸ್ಕಾಂತ (ಗುಜರಾತ್): ಮೊರ್ಬಿ ಸೇತುವೆ ಕುಸಿತ ದುರಂತದ ಬಗ್ಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ಗುಜರಾತ್‌ನ ಕೆವಾಡಿಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, 'ನಾನು ಏಕ್ತಾ ನಗರದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಮೊರ್ಬಿ ಸಂತ್ರಸ್ತರ ಜತೆಗಿದೆ. ನನ್ನ ಜೀವನದಲ್ಲಿ ಅಪರೂಪಕ್ಕೊಮ್ಮೆ, ನಾನು ಅಂತಹ ನೋವನ್ನು ಅನುಭವಿಸುತ್ತಿದ್ದೆ. ಒಂದೆಡೆ ನೋವಿನಿಂದ ಕೂಡಿದ ಹೃದಯವಿದ್ದರೆ ಮತ್ತೊಂದೆಡೆ ಕರ್ತವ್ಯದ ಹಾದಿ ತುಳಿದಿರುವೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. ದುಃಖದ ಈ ಸಮಯದಲ್ಲಿ, ಸರ್ಕಾರವು ಎಲ್ಲಾ ರೀತಿಯಲ್ಲೂ ನೊಂದ ಕುಟುಂಬಗಳೊಂದಿಗೆ ಇದೆ ಎಂದರು. ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿದು ಬಿದ್ದು ಕನಿಷ್ಠ 140 ಜನ ಜಲಸಮಾಧಿಯಾಗಿದ್ದಾರೆ. ಸುಮಾರು 200 ವರ್ಷಗಳ ಹಳೆಯ ತೂಗು ಸೇತುವೆಯನ್ನು ಕೆಲ ದಿನಗಳ ಹಿಂದಷ್ಟೇ ನವೀಕರಣಗೊಳಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲಾಗಿತ್ತು.
Last Updated : Feb 3, 2023, 8:30 PM IST