ಮಹಾರಾಜಗೋಪುರ ನಿರ್ಮಾಣ: ಶೃಂಗೇರಿಯಲ್ಲಿ ಮಹಾಕುಂಭಾಭಿಷೇಕ- ವಿಡಿಯೋ - Maha kumbhabhisheka
🎬 Watch Now: Feature Video
ಶಿವಮೊಗ್ಗ: ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಬೆಟ್ಟದಲ್ಲಿರುವ ಮಲಹಾನಿಕೇಶ್ವರ ಹಾಗೂ ಭವಾನಿ ಅಮ್ಮನವರ ದೇವಾಲಯದ ನೂತನ ರಾಜಗೋಪುರ ಉದ್ಘಾಟನೆ ನಿಮಿತ್ತ ಇಂದು ಬೆಳಗ್ಗೆ ಪೂಜಾ ಮಹಾಕುಂಭಾಭಿಷೇಕ ನೆರವೇರಿತು. ಪೀಠದ ಭಾರತೀ ತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತೀ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಸ್ತಂಭಗಣಪತಿ ದೇವಸ್ಥಾನದಲ್ಲಿ ಕುಂಭಾಭಿಷೇಕ, ಶ್ರೀ ಮಲಹಾನಿಕರೇಶ್ವರ ದೇವಸ್ಥಾನದಲ್ಲಿ ವೇದ, ಮಂತ್ರ ಪಠಣದೊಂದಿಗೆ ಸಹಸ್ರಕಲಶಾಭಿಷೇಕ, ಭವಾನಿ ದೇವಿಗೆ ಮಹಾಕುಂಭಾಭಿಷೇಕ, ಮಹಾಪೂಜೆ, ಮಹಾನೀರಾಜನಂ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.
ಭಾರತೀತೀರ್ಥ ಸ್ವಾಮೀಜಿ ಹಾಗೂ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಮಲಹಾನಿಕರೇಶ್ವರ ದೇವಾಲಯದಲ್ಲಿ ಮಲಹಾನಿಕರೇಶ್ವರ ದೇವನಿಗೆ ಮಹಾಕುಂಭಾಭಿಷೇಕ ನಡೆಸಿದರು. ನಂತರ ಭವಾನಿ ಅಮ್ಮನಿಗೆ ವಿಶೇಷ ಪೂಜೆ ನೇರವೇರಿಸಿದರು. ಇದಾದ ಬಳಿಕ ದೇವಾಲಯದ ಗೋಪುರಗಳಲ್ಲಿ ಹಾಗೂ ರಾಜಗೋಪುರಗಳಲ್ಲಿ ಕಳಸ ಪ್ರತಿಷ್ಠಾಪಿಸಿದರು.
ರಾಜಗೋಪುರ ಉದ್ಘಾಟನೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ರಾಜಗೋಪುರದ ಕಳಸಾರೋಹರಣದ ನಂತರ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದ ಭಾರತೀ ತೀರ್ಥ ಶ್ರೀ, ಮಲಹಾನಿಕರೇಶ್ವರ ಪ್ರಾಚೀನ ದೇವಸ್ಥಾನವಾಗಿದೆ. ಆದಿ ಶಂಕರಾಚಾರ್ಯರು ಆಗಮಿಸುವುದಕ್ಕಿಂತ ಮುಂಚೆ ಈ ದೇವಾಲಯ ಇತ್ತು. ಇದನ್ನೀಗ ಪೀಠವು ಸಂರಕ್ಷಣೆ ಮಾಡಿಕೊಂಡು ಬರುತ್ತಿದೆ. 38 ವರ್ಷಗಳ ಹಿಂದೆ ಕುಂಭಾಭಿಷೇಕ ನಡೆಸಲಾಗಿತ್ತು. ಇಂದು ಮತ್ತೆ ಕುಂಭಾಭಿಷೇಕ ನಡೆದಿದೆ. ದೇವಾಲಯಕ್ಕೆ ಆಕರ್ಷಕ ರಾಜಗೋಪುರ ನಿರ್ಮಾಣ ಮಾಡಲಾಗಿದೆ. ಮಲಹಾನಿಕರೇಶ್ವರ ಸಮಸ್ತ ಭಕ್ತರಿಗೆ ಶುಭವನ್ನುಂಟು ಮಾಡಲಿ ಎಂದು ಹಾರೈಸಿದರು.
ಇದನ್ನೂ ಓದಿ: 'ಕಮಲ ಕೆರೆಯಲ್ಲಿದ್ರೆ ಚಂದ, ತೆನೆ ಹೊಲದಲ್ಲಿದ್ರೆ ಚಂದ': ಡಿ.ಕೆ.ಶಿವಕುಮಾರ್