ಮಧುರೈನ ಮಸ್ತಾನಪಟ್ಟಿ ಟೋಲ್​ಗೆ ಟ್ರಕ್ ಡಿಕ್ಕಿ-ಸಿಬ್ಬಂದಿ ಸಾವು: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ತಮಿಳುನಾಡು ಅಪಘಾತ ಸುದ್ದಿ

🎬 Watch Now: Feature Video

thumbnail

By

Published : Jul 31, 2023, 6:44 PM IST

ಮಧುರೈ(ತಮಿಳುನಾಡು): ಮಧುರೈನ ಮಸ್ತಾನಪಟ್ಟಿ ಟೋಲ್ ಗೇಟ್​ನಲ್ಲಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ನೌಕರನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿದೆ. ಮಧುರೈ ಜಿಲ್ಲೆಯ ಸಖಿಮಂಗಲಂ ನಿವಾಸಿ ಸತೀಶ್ ಕುಮಾರ್ ಮೃತ ದುರ್ದೈವಿ.

ಮಾಹಿತಿ ಪ್ರಕಾರ "ಬ್ರೇಕ್ ವೈಫಲ್ಯದಿಂದ ವಾಹನ ನಿಯಂತ್ರಣ ಕಳೆದುಕೊಂಡಿತ್ತು. ಟೋಲ್ ಬೂತ್‌ನಲ್ಲಿ ಸತೀಶ್ ಕುಮಾರ್ ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಟ್ರಕ್ ಡಿಕ್ಕಿ ಹೊಡೆದು ಅವರನ್ನು ಕೆಲವು ಮೀಟರ್ ಎಳೆದೊಯ್ದಿದೆ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಆಂಧ್ರಪ್ರದೇಶದ ಕಾಕಿನಾಡದಿಂದ ಕೇರಳಕ್ಕೆ 30 ಟನ್ ಅಕ್ಕಿಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ನ್ನು ಗುಂಟೂರಿನ ಕೆ.ಬಾಲಕೃಷ್ಣನ್ (41) ಎಂಬುವರು ಚಲಾಯಿಸುತ್ತಿದ್ದರು. ಬ್ರೇಕ್‌ ವೈಫಲ್ಯದಿಂದ ವಾಹನ ಬಂಡಿಕೋಯಿಲ್ ಬಳಿ ಸೇತುವೆ ದಾಟಿದ ಸ್ವಲ್ಪ ಸಮಯದಲ್ಲೇ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯುದ್ದಕ್ಕೂ ರೆಸ್ಟೋರೆಂಟ್‌ಗಳು ಇದ್ದುದರಿಂದ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸುವ ಅವರ ಪ್ರಯತ್ನ ವಿಫಲವಾಗಿದೆ. ಹೀಗಾಗಿ, ಟೋಲ್ ಬೂತ್ ಬಳಿ ಬಂದಾಗ ಕೆಲವು ವಾಹನಗಳು ಸಾಲುಗಟ್ಟಿ ನಿಂತಿರುವುದನ್ನು ಕಂಡು, ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟ್ರಕ್ ಅನ್ನು ಟೋಲ್ ಬೂತ್ ಎದುರು ಬದಿಗೆ ತಿರುಗಿಸಲು ನಿರ್ಧರಿಸಿದರು. ಆಗ ಸತೀಶ್ ಕುಮಾರ್ ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಅವಘಡ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಳಿಕ ಎದುರಿಗೆ ಬರುತ್ತಿದ್ದ ಪ್ರಯಾಣಿಕರ ವಾಹನಕ್ಕೂ ಟ್ರಕ್​ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಮತ್ತು ಮಹಿಳಾ ಟೋಲ್ ಬೂತ್ ಉದ್ಯೋಗಿ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಂಬ್ಯುಲೆನ್ಸ್‌ಗೆ ಟ್ರಕ್ ಡಿಕ್ಕಿ.. ಒಂದೇ ಕುಟುಂಬದ ಮೂವರು ಸಾವು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.