'ವಿಮಾನ ಉಲ್ಟಾ ಹಾರಾಡಿ ಬ್ಲಾಸ್ಟ್ ಆಯ್ತು' : ಪ್ರತ್ಯಕ್ಷದರ್ಶಿಗಳ ಮಾತು - etv bharat kannada
🎬 Watch Now: Feature Video
ಚಾಮರಾಜನಗರ: "ವಿಮಾನ ತೀರಾ ಸಮೀಪದಲ್ಲೇ ಬಂದಿತ್ತು ನೋಡುವಷ್ಟರಲ್ಲಿ ಉಲ್ಟಾ ಆಗಿ ಬ್ಲಾಸ್ಟ್ ಆಯಿತು ಎಂದು ವಿಮಾನ ಪತನ ಕಂಡ ಪ್ರತ್ಯಕ್ಷದರ್ಶಿ ಸೋಮಶೇಖರ್ ಹೇಳಿದ್ದಾರೆ. ಚಾಮರಾಜನಗರ ತಾಲೂಕಿನ ಭೋಗಪುರ ಸಮೀಪದ ಜಮೀನೊಂದರಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಲಘು ವಿಮಾನ ಪತನಗೊಂಡ ಬಗ್ಗೆ ಮಾತನಾಡಿದ ಅವರು, "ಸಮೀಪದಲ್ಲೇ ಚಾಮರಾಜನಗರದ ಕಡೆ ವಿಮಾನ ಹೋಯಿತು, ಬಳಿಕ ಮತ್ತೇ ನಮ್ಮ ಊರಿನತ್ತ ಬಂದಿತು. ನೋಡುವಷ್ಟರಲ್ಲಿ ಇಬ್ಬರು ಹೊರ ನೆಗೆದರು, ಕೆಲವೇ ಕ್ಷಣಗಳಲ್ಲಿ ವಿಮಾನ ಉಲ್ಟಾ ಆಗಿ ಬ್ಲಾಸ್ಟ್ ಆಯಿತು. ವಿಮಾನ ಬಿದ್ದ 2 ಕಿಮೀ ದೂರದಲ್ಲಿ ಅವರು ಬಿದ್ದಿದ್ದರು, ಸೇನೆಯವರು ಬರುತ್ತಾರೆ ಎಂದು ತಿಳಿಸಿ ಅಲ್ಲೇ ವಿರಮಿಸುತ್ತಿದ್ದರು" ಎಂದು ಸೋಮಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು, ಈ ಘಟನೆ ಬಗ್ಗೆ ಎಡಿಸಿ ಕಾತ್ಯಾಯಿನಿದೇವಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇಬ್ಬರು ಪೈಲೆಟ್ಗಳು ಗಾಯಗೊಂಡಿದ್ದಾರೆ, ಲಘು ವಿಮಾನ ಏಕೆ ಇಷ್ಟು ದೂರ ಬಂದಿತು ಎಂಬ ಮಾಹಿತಿ ಇಲ್ಲ, ವಾಯುಸೇನೆ ಸಿಬ್ಬಂದಿಯೇ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಭಾರತೀಯ ವಾಯುಸೇನೆಯ ಲಘು ವಿಮಾನ ಪತನ: ಪೈಲೆಟ್ಗಳು ಪಾರು