ಕೋಳಿ ಫಾರಂಗೆ ನುಗ್ಗಿ ಬಂಧಿಯಾದ ಚಿರತೆ: ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರ-ವಿಡಿಯೋ
🎬 Watch Now: Feature Video
Published : Sep 1, 2023, 10:04 PM IST
ತುಮಕೂರು: ಆಹಾರ ಅರಸಿ ಬಂದು ಕೋಳಿ ಫಾರಂಗೆ ನುಗ್ಗಿದ ಚಿರತೆ ಕೊನೆಗೆ ಬಂಧಿಯಾಗಿರುವ ಘಟನೆ ತುಮಕೂರು ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆಯಲ್ಲಿ ಇಂದು ನಡೆದಿದೆ. ಮರಿಗೌಡಯ್ಯ ಎಂಬವರಿಗೆ ಸೇರಿದ ಕೋಳಿ ಫಾರಂಗೆ ಆಹಾರ ಹುಡುಕಿ ಬಂದಿದ್ದ ನಾಲ್ಕು ವರ್ಷದ ಚಿರತೆ, ಅಲ್ಲಿಂದ ಮತ್ತೆ ವಾಪಸ್ ಹೋಗಲು ದಾರಿ ತಿಳಿಯದೇ ಸಿಕ್ಕಿಹಾಕಿಕೊಂಡಿದೆ.
ಚಿರತೆ ಕಂಡು ಗಾಬರಿಯಾದ ಕೋಳಿ ಫಾರಂ ಸಿಬ್ಬಂದಿ, ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಚಿರತೆ ರಕ್ಷಣೆ ಮಾಡಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅರಿವಳಿಕೆ ತಜ್ಞರು ಹಾಗೂ ಸಹಾಯಕ ನಿರ್ದೇಶಕ ಡಾ.ಕೆ.ಎಸ್.ಉಮಾಶಂಕರ್ ಅರಿವಳಿಕೆ ಮದ್ದು ನೀಡಿದರು. ನತಂರ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು.
ಕಳೆದ ನಾಲ್ಕು ದಿನಗಳ ಹಿಂದೆ ಹೊಲದಲ್ಲಿ ಚಿರತೆ ಕಾಣಿಸಿಕೊಂಡ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ತರ್ಬೇನಹಳ್ಳಿಯಲ್ಲಿ ನಡೆದಿತ್ತು. ಗ್ರಾಮಸ್ಥರು ಹೊಲಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿತ್ತು. ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಚಿರತೆ ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದ್ದರು.
ಇದನ್ನೂ ಓದಿ: ತೋಟದಲ್ಲಿ ಪ್ರತ್ಯಕ್ಷವಾದ ಚಿರತೆ ಕಂಡು ದಿಕ್ಕಾಪಾಲಾಗಿ ಓಡಿದ ರೈತರು: ವಿಡಿಯೋ