ತಂತಿ ಬೇಲಿಗೆ ಸಿಲುಕಿ ನರಳಾಡಿದ ಚಿರತೆ ರಕ್ಷಣೆ.. ವಿಡಿಯೋ - ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ
🎬 Watch Now: Feature Video
ಚಿಕ್ಕಮಗಳೂರು : ಕಾಫಿ ತೋಟದ ಬೇಲಿ ದಾಟುವಾಗ ತಂತಿಗೆ ಸಿಲುಕಿ ಚಿರತೆಯೊಂದು ಒದ್ದಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಎಂಬಲ್ಲಿ ನಡೆದಿದೆ. ಈ ವೇಳೆ ತಂತಿ ಬೇಲಿಗೆ ಸಿಲುಕಿ ಚಿರತೆ ಒದ್ದಾಡಿದ್ದು, ಅದರ ಹೊಟ್ಟೆಗೆ ಸೀಳಿದ ಗಾಯವಾಗಿದೆ. ಇದರಿಂದಾಗಿ ಅದು ಗಂಟೆಗಟ್ಟಲೇ ನೋವಿನಿಂದ ನರಳಾಡಿದೆ.
ಚಿರತೆ ನಿನ್ನೆ ರಾತ್ರಿ ತಂತಿ ಬೇಲಿಗೆ ಸಿಲುಕಿಕೊಂಡಿದ್ದು, ಇಂದು ಬೆಳಿಗ್ಗೆ ಗ್ರಾಮಸ್ಥರ ಗಮನಕ್ಕೆ ಬಂದಿದೆ. ರಸ್ತೆಯಂಚಿನಲ್ಲಿಯೇ ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ತಕ್ಷಣ ಸುದ್ದಿ ಮುಟ್ಟಿಸಿದ್ದಾರೆ. ತರುವಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದರು.
ಅಧಿಕಾರಿಗಳು, ಜನರನ್ನು ಕಂಡು ಚಿರತೆ ಮತ್ತಷ್ಟು ಉದ್ರೇಕಕಾರಿಯಾಗಿ ವರ್ತಿಸಿದೆ. ಚಿರತೆಯ ಸಮೀಪಕ್ಕೆ ತೆರಳಲು ಅರಣ್ಯ ಇಲಾಖೆ ಸಿಬ್ಬಂದಿ ಹಿಂದೇಟು ಹಾಕಿದ್ದರು. ಬಳಿಕ ಅರಣ್ಯ ಇಲಾಖೆ ಚಿರತೆಯನ್ನು ತಂತಿಯಿಂದ ಬಿಡಿಸಿ ಚಿಕಿತ್ಸೆ ನೀಡುವ ಕಾರ್ಯ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರವಳಿಕೆ ತಜ್ಞರು ಇಲ್ಲದಿರುವುದರಿಂದ ಶಿವಮೊಗ್ಗದಿಂದ ತಜ್ಞರನ್ನು ಕರೆಸಲಾಗಿದೆ. ನಂತರ ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲೆಗೆ ಓರ್ವ ಅರವಳಿಕೆ ತಜ್ಞರನ್ನು ಅರಣ್ಯ ಇಲಾಖೆ ಕೂಡಲೇ ನೇಮಿಸಬೇಕು. ಇದರಿಂದ ಸಂಕಷ್ಟದಲ್ಲಿರುವ ಕಾಡು ಪ್ರಾಣಿಗಳನ್ನು ಉಳಿಸಲು ನೆರವಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಕಿನ್ನಿಗೋಳಿಯಲ್ಲಿ ಉರುಳಿಗೆ ಸಿಲುಕಿ ಪ್ರಾಣ ಬಿಟ್ಟ ಚಿರತೆ