ಪ್ರಚಾರ ರಥದಿಂದ ಆಯತಪ್ಪಿ ಕೆಳಬಿದ್ದ ಕೆಟಿಆರ್: ಅಪಘಾತದಿಂದ ಪಾರಾದ ಬಿಆರ್ಎಸ್ ನಾಯಕ.. ವಿಡಿಯೋ - ಪ್ರಚಾರ ರಥದದಿಂದ ಕೆಳಬಿದ್ದ ಕೆಟಿಆರ್
🎬 Watch Now: Feature Video
Published : Nov 9, 2023, 4:28 PM IST
|Updated : Nov 9, 2023, 4:45 PM IST
ನಿಜಾಮಬಾದ್: ಇಲ್ಲಿಯ ಆರ್ಮೂರ್‌ನಲ್ಲಿ ಆಯೋಜಿಸಿದ್ದ ಬಿಆರ್ಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ವೇಳೆ ಪ್ರಚಾರ ರಥದಿಂದ ಬಿಆರ್ಎಸ್ ನಾಯಕ ಕೆಟಿಆರ್ ಆಯತಪ್ಪಿ ಕೆಳಬಿದ್ದಿರುವ ಘಟನೆ ಇಂದು ನಡೆದಿದೆ. ಬಿಆರ್ಎಸ್ ಅಭ್ಯರ್ಥಿ ಜೀವನ್ ರೆಡ್ಡಿ ನಾಮಪತ್ರ ಸಲ್ಲಿಕೆಯಲ್ಲಿ ಸಚಿವ ಕೆಟಿಆರ್ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು. ಇದಕ್ಕಾಗಿ ಪ್ರಚಾರ ವಾಹನದಲ್ಲಿ ತೆರಳಿತ್ತಿದ್ದರು. ಈ ವೇಳೆ, ವಾಹನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಕೆಟಿಆರ್, ಸಂಸದ ಸುರೇಶ್ ರೆಡ್ಡಿ ಹಾಗೂ ಅಭ್ಯರ್ಥಿ ಜೀವನ್ ರೆಡ್ಡಿ ವಾಹನದ ಮೇಲೆ ಅಳವಡಿಸಿದ್ದ ರೇಲಿಂಗ್ ನಿಂದ ಕೆಳ ಬಿದ್ದಿದ್ದಾರೆ.
ದಿಢೀರ್ ಬ್ರೇಕ್ ಹಾಕಿದ್ದರಿಂದ ವಾಹನದ ರೈಲಿಂಗ್ ಮುರಿದ ಹೋಗಿ ಘಟನೆ ಸಂಭವಿಸಿದೆ. ತಕ್ಷಣ ಎಚ್ಚೆತ್ತ ಕೆಟಿಆರ್ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಣೆ ಮಾಡಿದ್ದಾರೆ. ಕೆಟಿಆರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆರ್ಮೂರ್ ಪಟ್ಟಣದ ಹಳೆ ಆಲೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ಗಾಯಗಳಾಗದ ಕಾರಣ ಜೀವನ್ ರೆಡ್ಡಿ ಜತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೆಟಿಆರ್, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿ ಬಳಿಕ ಕೊಡಂಗಲ್ ರೋಡ್ ಶೋನಲ್ಲಿ ಭಾಗವಹಿಸಲು ತೆರಳಿದರು.
ಇದನ್ನೂ ಓದಿ: ಫೈಬರ್ ನೆಟ್ ಹಗರಣ: ನವೆಂಬರ್ 30ರವರೆಗೆ ಚಂದ್ರಬಾಬು ನಾಯ್ಡುಗೆ ಬಂಧನದಿಂದ ರಕ್ಷಣೆ ವಿಸ್ತರಿಸಿದ ಸುಪ್ರೀಂ