SSLCಯಲ್ಲಿ C+ .. ವಿದ್ಯಾರ್ಥಿ ದಿಲ್ ಖುಷ್, ಮಳೆಯಲ್ಲೇ ಮಸ್ತ್ ಡ್ಯಾನ್ಸ್ - ಎಸ್ಎಸ್ಎಲ್ಸಿಯಲ್ಲಿ ಜಸ್ಟ್ ಪಾಸಾಗಿದ್ದಕ್ಕೆ ಡ್ಯಾನ್ಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15331009-thumbnail-3x2-sslcdance.jpg)
ಕೊಪ್ಪಳ: ಪರೀಕ್ಷೆ ಯಾವುದೇ ಆಗಿರಲಿ ಅದರಲ್ಲಿ ಅತೀ ಹೆಚ್ಚು ಅಂಕ ಪಡೆದು ಅಗ್ರಸ್ಥಾನ ಗಳಿಸಿದವರು ಸಿಹಿ ಹಂಚಿ ಖುಷಿ ಪಡುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಎಸ್.ಎಸ್.ಎಲ್.ಸಿಯಲ್ಲಿ C+ ಗ್ರೇಡ್ನೊಂದಿಗೆ ಪಾಸ್ ಆಗಿದ್ದಕ್ಕೆ ಮಳೆಯಲ್ಲಿ ಕುಣಿದು ಸಂಭ್ರಮಿಸಿದ್ದಾನೆ. ಕೊಪ್ಪಳ ತಾಲೂಕಿನ ಕಾತರಕಿ ನಿವಾಸಿ ಶಿವರಾಜ್ ಎಂಬಾತ ನಾನು ಪಾಸ್ ಆದ್ನೋ ಎಂದು ಕಿರುಚುತ್ತ ಮಳೆಯಲ್ಲೇ ಡಾನ್ಸ್ ಮಾಡಿದ್ದಾನೆ. ನಮ್ಮ ಮಗ ಪಾಸಾಗಲು ಸಾಧ್ಯವೇ ಇಲ್ಲ, ಅವನು ಒಂದು ದಿನವೂ ಕುಳಿತು ಓದಿಲ್ಲ ಎಂದು ಶಿವರಾಜ ಪಾಲಕರು ಹೇಳಿದ್ದರಂತೆ. ಆದ್ರೆ ಇಂದು ಬಂದಿರುವ ಈ ಫಲಿತಾಂಶ ಶಿವರಾಜ್ಗೆ ಖುಷಿ ಕೊಟ್ಟಿದೆ.
Last Updated : Feb 3, 2023, 8:23 PM IST