ದುಡ್ಡಿನ ಪಲ್ಲಕ್ಕಿ ಉತ್ಸವದಲ್ಲಿ ಹಣದ ಕಾರುಬಾರು.. ಹೂವಿನ ಬದಲು ನೋಟಿನ ಹಾರ ಹಾಕಿ ಹರಕೆ ತೀರಿಸುವ ಭಕ್ತರು - kokkanuru village
🎬 Watch Now: Feature Video
ದಾವಣಗೆರೆ: ಪಲ್ಲಕ್ಕಿ ಉತ್ಸವಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುವುದು ಸಾಮಾನ್ಯವಾಗಿ ನೋಡಿರುತ್ತೇವೆ. ಅದರೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಮಾತ್ರ ವಿಭಿನ್ನವಾಗಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಇಲ್ಲಿ ನಡೆಯುವ ಪಲ್ಲಕ್ಕಿ ಉತ್ಸವದಲ್ಲಿ ದೇವರ ಪಲ್ಲಕ್ಕಿಗೆ ಹೂವಿನ ಹಾರದ ಬದಲು ಹಣದ ಹಾರ ಹಾಕುತ್ತಾರೆ. ಕೊಕ್ಕನೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ನೋಟಿನ ಹಾರಗಳನ್ನು ಹಾಕಿ ಹರಕೆ ತೀರಿಸುತ್ತಾರೆ.
ಸಾವಿರಾರು ರೂಪಾಯಿ ನೋಟಿನ ಹಾರವೇ ಈ ದೇವರಿಗೆ ಭಕ್ತಿರೂಪವಂತೆ. 500, 1000, 2000 ಮುಖಬೆಲೆಯ ನೋಟಿನ ಹಾರ ಹಾಕುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ದುಡ್ಡಿನ ಹಾರ ಹಾಕಿ ಹರಕೆ ತೀರಿಸುವ ಗ್ರಾಮಸ್ಥರು, ಊರಿನ ಪ್ರತಿ ಮನೆಗೂ ತೆರಳುವ ಪಲ್ಲಕ್ಕಿಗೆ ತಮ್ಮ ಕೈಲಾದ ನೋಟಿನ ಹಾರ ಹಾಕುತ್ತಾರೆ. ಆಂಜನೇಯ ಸ್ವಾಮಿ ರಥೋತ್ಸವ ಬಳಿಕ ನಡೆಯುವ ಪಲ್ಲಕ್ಕಿ ಉತ್ಸವ ಉತ್ಸವದಲ್ಲಿ ಅಕ್ಕ-ಪಕ್ಕದ ಹಳ್ಳಿಯ ಭಕ್ತರು ಸಹ ಉತ್ಸವದಲ್ಲಿ ಭಾಗಿಯಾಗಿ ಆಂಜನೇಯ ಸ್ವಾಮಿಗೆ ನಮಿಸಿ ಪುನೀತರಾಗುತ್ತಾರೆ.
ಇದನ್ನೂ ಓದಿ: ಎದೆ ಝಲ್ ಎನಿಸುವ 11 ಅಡಿ ಉದ್ದದ ಕಾಳಿಂಗ ಸರ್ಪ! ನೋಡಿ ವಿಡಿಯೋ