ಮೋದಿ ಸಮಾವೇಶದ ಯಶಸ್ಸಿಗೆ ದೇವರ ಮೊರೆ: 108 ತೆಂಗಿನಕಾಯಿಯ ಗಣಹೋಮ ಪೂಜೆ ಸಲ್ಲಿಸಿದ ಶಾಸಕಿ! - ತೆಂಗಿನಕಾಯಿಯ ಗಣಹೋಮ
🎬 Watch Now: Feature Video
ಕಾರವಾರ (ಉತ್ತರ ಕನ್ನಡ): ನಾಳೆ ಅಂಕೋಲಾದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಯಶಸ್ವಿ ಆಗಲೆಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ದೇವರ ಮೊರೆ ಹೋಗಿದ್ದಾರೆ. ಅಮದಳ್ಳಿಯ ಶ್ರೀ ಮಹಾಗಣಪತಿ ದೇವಾಲಯದಲ್ಲಿ, ಬುಧವಾರ ನಡೆಯಲಿರುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಮತ್ತು ಚುನಾವಣೆಯಲ್ಲಿ ಗೆಲುವಿಗೆ ಪ್ರಾರ್ಥಿಸಿ ಕಾರವಾರ-ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕಿ ರೂಪಾಲಿ ನಾಯ್ಕ ಅವರು ಮಹಾಗಣಪತಿ ದೇವರಿಗೆ 108 ತೆಂಗಿನಕಾಯಿಯ ಗಣಹೋಮ ಪೂಜೆಯನ್ನು ಸಲ್ಲಿಸಿದ್ದಾರೆ.
ವೀರಗಣಪತಿ ದೇಗುಲದಲ್ಲಿ ಪುತ್ರ ಪರ್ಭತ್, ಸೊಸೆ ರೇಖಾ ಅವರೊಂದಿಗೆ ಆಗಮಿಸಿ ಪೂಜೆ ಸಲ್ಲಿಸಿದ ಅವರು, ನಾಳೆ ನಡೆಯಲಿರುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಎದುರಾಗದಂತೆ ಯಶಸ್ವಿಯಾಗಿ ನೆರವೇರಲೆಂದು ಗಣಹೋಮ ನಡೆಸಿದ್ದಾರೆ. ದೇಗುಲದ ಪ್ರಧಾನ ಅರ್ಚಕ ಮಹಾಬಲೇಶ್ವರ ಹಾಗೂ ಮಧುಕೇಶ್ವರ ಭಟ್ ಅವರ ಅರ್ಚಕತ್ವದಲ್ಲಿ ಬೆಳಗ್ಗೆಯಿಂದ ಗಣಹೋಮ ನಡೆಯಿತು.
ಇದನ್ನೂ ಓದಿ : ಅಂದು ಶ್ರೀರಾಮನನ್ನು ಬಂಧಿಸಿಟ್ಟಿದ್ದರು, ಈಗ ಬಜರಂಗದಳ ಕಾರ್ಯಕರ್ತರ ಬಂಧನಕ್ಕೆ ಕಾಂಗ್ರೆಸ್ ಸಂಕಲ್ಪ ಮಾಡಿದೆ : ಮೋದಿ ವಾಗ್ದಾಳಿ