ಶಿವಮೊಗ್ಗದಲ್ಲಿ ಆಟೋ ಚಲಾಯಿಸಿದ ಕೆ ಎಸ್ ಈಶ್ವರಪ್ಪ - ಆಟೋ ಸ್ಟ್ಯಾಂಡ್ ಅಭಿವೃದ್ದಿ
🎬 Watch Now: Feature Video
ಶಿವಮೊಗ್ಗ ನಗರದ ಪ್ರವಾಸಿ ಮಂದಿರದ ಸಮೀಪ ಇಂದು ಆಟೋ ಸ್ಟ್ಯಾಂಡ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಆಟೋ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು. ಹೆಲಿಪ್ಯಾಡ್ ವೃತ್ತದಲ್ಲಿ ನೂತನವಾಗಿ ಆಟೋ ಸ್ಟ್ಯಾಂಡ್ ಅಭಿವೃದ್ಧಿಗೊಳಿಸಲಾಗಿದೆ. ಇದಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲಾಗಿದೆ. ಇಂದು ಟೇಪ್ ಕತ್ತರಿಸುವ ಮೂಲಕ ಕೆ. ಎಸ್ ಈಶ್ವರಪ್ಪ ಅವರು ನಿಲ್ದಾಣ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಮೇಯರ್ ಸುವರ್ಣ ಶಂಕರ, ಸೂಡಾ ಅಧ್ಯಕ್ಷ ನಾಗರಾಜ್, ಮುಖಂಡ ಸುಭಾಷ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Last Updated : Feb 3, 2023, 8:27 PM IST