ದೊಡ್ಡಬಳ್ಳಾಪುರಕ್ಕೆ ಎಂಟ್ರಿ ಕೊಟ್ಟ ಪಂಚರತ್ನ ರಥಯಾತ್ರೆ... ಹೆಚ್ಡಿಕೆಗೆ ಅದ್ದೂರಿ ಸ್ವಾಗತ - ಹೆಚ್ಡಿಕೆ ಮದುರೆ ಗ್ರಾಮದಲ್ಲಿ ವಾಸ್ತವ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17061362-thumbnail-3x2-tha.jpg)
ದೊಡ್ಡಬಳ್ಳಾಪುರ: ಪಂಚರತ್ನ ರಥಯಾತ್ರೆ ಇಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ನಿನ್ನೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿದ್ದ ರಥಯಾತ್ರೆ, ಇಂದು ನಾಗದೇನಹಳ್ಳಿ ಗ್ರಾಮದ ಮೂಲಕ ದೊಡ್ಡಬಳ್ಳಾಪುರಕ್ಕೆ ಆಗಮಿಸಿದೆ. ಹೆಚ್ಡಿ ಕುಮಾರಸ್ವಾಮಿ ಅವರನ್ನು ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಮತ್ತು ಮಲ್ಲಿಗೆ ಹಾರ ಹಾಕುವ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ, ಹೆಚ್ಡಿಕೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ಮುಖಂಡರಾದ ಹರೀಶ್ ಗೌಡ ಮತ್ತು ಅಪ್ಪಯ್ಯಣ್ಣ ಸಾಥ್ ನೀಡಿದ್ದಾರೆ. ಇಂದು ಹೆಚ್ಡಿಕೆ ಮದುರೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
Last Updated : Feb 3, 2023, 8:33 PM IST