ಬಡವರ ಸಂಕಷ್ಟ ನಿವಾರಣೆಗೆ ಪಂಚ ಯೋಜನೆ ಜಾರಿ : ಕುಮಾರಸ್ವಾಮಿ

🎬 Watch Now: Feature Video

thumbnail

By

Published : Feb 25, 2023, 9:14 AM IST

ಚಿಕ್ಕಮಗಳೂರು: ಜೆಡಿಎಸ್​ ಪಕ್ಷದ ಪಂಚರತ್ನ ರಥಯಾತ್ರೆಗೆ ಶುಕ್ರವಾರ ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಮ್ಮರಡಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ, 'ರಾಜ್ಯದ ಬಡವರ ಸಂಕಷ್ಟ ನಿವಾರಣೆಗೆ ಪಂಚ ಯೋಜನೆ ಜಾರಿ ಮಾಡುತ್ತೇನೆ. ನಮ್ಮ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಜನತೆ ಆಶೀರ್ವದಿಸಬೇಕು. ಮಲೆನಾಡು ಭಾಗದ ಜನರ ಸಮಸ್ಯೆ ಪರಿಹರಿಸುವೆ. ಈ ಭಾಗದ ಅಡಕೆ ಬೆಳೆಗಾರರ ಅಭಿವೃದ್ಧಿಗೆ ವಿಶೇಷ ಯೋಜನೆ ತರಲಾಗುವುದು' ಎಂದರು.

'ರೈತರ ಬಗ್ಗೆ ಬಿಜೆಪಿ, ಕಾಂಗ್ರೆಸ್​​ಗೆ ಯಾವುದೇ ರೀತಿಯ ಕಾಳಜಿ ಇಲ್ಲ. ಸ್ತ್ರಿ ಶಕ್ತಿ, ಸ್ವ ಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ. ಶಾಲಾ ಮಕ್ಕಳಿಗೆ ಪಿಯುಸಿವರೆಗೆ ಉಚಿತ ಕನ್ನಡ, ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತೇವೆ. ಮಲೆನಾಡು ಜನರು ಮನೆ ಕಟ್ಟಿಕೊಳ್ಳಲು ಕಷ್ಟವಾಗುತ್ತಿದ್ದು, ಇದಕ್ಕೆ ಪಂಚರತ್ನ ಯೋಜನೆಯಲ್ಲಿ ಪರಿಹಾರವಿದೆ. ನಾನು 18 ಗಂಟೆ ಕೆಲಸ ಮಾಡುತ್ತಿರುವುದು ಅಧಿಕಾರಕ್ಕಲ್ಲ, ನಿಮ್ಮ ಸಮಸ್ಯೆಗೆ ಸ್ಪಂದಿಸಲು ಸಹಕರಿಸಿ' ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದೂ ಕೂಡ ಪಂಚರತ್ನ ರಥಯಾತ್ರೆ ಮುಂದುವರೆಯಲಿದೆ. ಶೃಂಗೇರಿ ಕ್ಷೇತ್ರದಲ್ಲಿ ರಥಯಾತ್ರೆ ಸಾಗಲಿದ್ದು, ಜೆಡಿಎಸ್ ಅಭ್ಯರ್ಥಿ ಸುಧಾಕರ ಶೆಟ್ಟಿ ಪರ ಕುಮಾರಸ್ವಾಮಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ : ಬಿಜೆಪಿ ಕಚೇರಿ, ಸಿಎಂ ಅಧಿಕೃತ ನಿವಾಸದಲ್ಲಿ ಸರಣಿ ಸಭೆ: ಚುನಾವಣಾ ಕಾರ್ಯತಂತ್ರ ಚರ್ಚೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.