ವೇದಿಕೆಯಲ್ಲಿ ಕಣ್ಣೀರಿಟ್ಟ ಕೊಪ್ಪಳ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿವಿ ಚಂದ್ರಶೇಖರ್ - JDS Candidate CV Chandrashekhar

🎬 Watch Now: Feature Video

thumbnail

By

Published : May 4, 2023, 3:38 PM IST

ಕೊಪ್ಪಳ: ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜೆಡಿಎಸ್‌ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ ವಿ ಚಂದ್ರಶೇಖರ್​ ಅವರು, ಬಿಜೆಪಿ ಪಕ್ಷ ಹಾಗೂ ಸಂಸದ ಸಂಗಣ್ಣ ಕರಡಿ ಅವರು ತಮಗೆ ಮಾಡಿದ್ದ ಅನ್ಯಾಯವನ್ನು ನೆನೆದು ಭಾವೋದ್ವೇಗಕ್ಕೆ ಒಳಗಾಗಿ ಗಳಗಳನೆ ಅತ್ತ ಪ್ರಸಂಗ ಜರುಗಿತು. 

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿ ವಿ ಚಂದ್ರಶೇಖರ್​ ಮಾತನಾಡಿ, ನನ್ನನ್ನು ನೀವು ತುಳಿಯುತ್ತಾ ಬಂದಿರಿ. ತುಳಿದು ತುಳಿದು ಸಾಯಿಸುವ ಪ್ರಯತ್ನ ಮಾಡಿದಿರಿ ಎಂದು ಸಂಗಣ್ಣ ಕರಡಿ ವಿರುದ್ಧ ಹರಿಹಾಯ್ದರು. ಆದರೆ, ಈ ಕ್ಷೇತ್ರದ ಜನ ನನ್ನನ್ನು ಕೈ ಹಿಡಿದಿದ್ದಾರೆ. ನನ್ನನ್ನು ಕ್ಷೇತ್ರದ ಜನ ಎಂದಿಗೂ ನಡುನೀರಿನಲ್ಲಿ ಕೈ ಬಿಡಲಾರರು, ದಡ ಸೇರಿಸುತ್ತಾರೆ. ದಯವಿಟ್ಟು ಕೈಮುಗಿಯುತ್ತೇನೆ, ಕಾಲು ಮುಗಿಯುತ್ತೇನೆ. ಕೊಪ್ಪಳದ ಸ್ವಾಭೀಮಾನಕ್ಕೋಸ್ಕರ, 30 ವರ್ಷದ ಬಂಧನದ ಬಿಡುಗಡೆಗೋಸ್ಕರ ನನಗೆ ಆಶೀರ್ವದಿಸಬೇಕು ಎಂದು ವೇದಿಕೆ ಮೇಲೆ ದೀರ್ಘದಂಡ ನಮಸ್ಕಾರ ಹಾಕಿದರು.

ಇದನ್ನೂ ನೋಡಿ: ಜೆಡಿಎಸ್ ಪರಿವಾರ ರಾಜನೀತಿ ಉಳಿಸಲು ಮತ ಕೇಳುತ್ತಿದೆ: ಕಾಂಗ್ರೆಸ್​ ವಿರುದ್ಧವೂ ಮೋದಿ ವಾಗ್ದಾಳಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.