2025 TRIUMPH SPEED TWIN 1200: ಪ್ರೀಮಿಯಂ ಬೈಕ್ ತಯಾರಕ ಟ್ರಯಂಫ್ ಮೋಟಾರ್‌ಸೈಕಲ್ಸ್ ತನ್ನ ಇತ್ತೀಚಿನ 'ಸ್ಪೀಡ್ ಟ್ವಿನ್ 1200' ಸೀರಿಸ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಈ ಸೀರಿಸ್ನಲ್ಲಿ ಎರಡು ಮಾದರಿಗಳನ್ನು ಹೊರ ತಂದಿದೆ. ಇದರ ಸ್ಟ್ಯಾಂಡರ್ಡ್ ವರ್ಸನ್ ಬೆಲೆ ರೂ. 12.75 ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ಹೈ-ಸ್ಪೆಕ್ ಆರ್‌ಎಸ್ ರೂಪಾಂತರದ ಬೆಲೆ ರೂ. 15.50 ಲಕ್ಷ (ಎಕ್ಸ್ ಶೋ ರೂಂ). ಈ ಎರಡೂ ಮಾದರಿಗಳು ಒಂದೇ ರೀತಿಯ ಎಂಜಿನ್, ಸ್ಟೈಲಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿವೆ. ಇವೆರಡರ ನಡುವಿನ ವ್ಯತ್ಯಾಸ ಎಂದರೆ ವ್ಹೀಲ್ ಯುನಿಟ್ಗಳಲ್ಲಿ ಮಾತ್ರ ಕಾಣಬಹುದಾಗಿದೆ.
ಟ್ರಯಂಫ್ ಸ್ಪೀಡ್ ಟ್ವಿನ್ 1200 ಎಂಜಿನ್ ಹೇಗಿದೆ?: ಸ್ಪೀಡ್ ಟ್ವಿನ್ 1200, RS ಹಿಂದಿನಂತೆಯೇ ಪಾರಲಲ್-ಟ್ವೀನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಆದರೆ ಈ ಎಂಜಿನ್ ಈಗ ಹೊಸ ಕ್ಯಾಮ್, ಸ್ಪೋರ್ಟಿಯರ್ ಟ್ಯೂನ್ ಮತ್ತು 8,000 rpm ನ ಹೆಚ್ಚಿನ ರೆಡ್‌ಲೈನ್ ಪಡೆಯುತ್ತದೆ. ಈ ಎಂಜಿನ್ ಅನ್ನು 7,750rpm ನಲ್ಲಿ 103.5bhp ಪವರ್ ಮತ್ತು 4,250rpm ನಲ್ಲಿ 112Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.
ಎರಡೂ ಮಾದರಿಗಳು 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್‌ನೊಂದಿಗೆ ಬರುತ್ತವೆ. ಆದರೆ RS ಮಾತ್ರ ಬೈ ಡೈರೆಕ್ಷನ್ ಕ್ವಿಕ್ಶಿಫ್ಟರ್ ಅನ್ನು ಹೊಂದಿದೆ. ಈ ವೈಶಿಷ್ಟ್ಯದೊಂದಿಗೆ ಟ್ರಯಂಫ್ ತಯಾರಿಸಿದ ಮೊದಲ ನಿಯೋ-ರೆಟ್ರೊ ಬೈಕ್ ಇದಾಗಿದೆ. ಈ ಯುನಿಟ್ ವಿಭಿನ್ನ ಫುಟ್‌ಪೆಗ್ ಪ್ಲೇಸ್ಮೆಂಟ್ ಹೊಂದಿರುವುದರಿಂದ ಅದನ್ನು 'ಸ್ಟ್ಯಾಂಡರ್ಡ್ 1200' ಗೆ ಅಳವಡಿಸಲಾಗುವುದಿಲ್ಲ.
ಟ್ರಯಂಫ್ ಸ್ಪೀಡ್ ಟ್ವಿನ್ 1200 ಬದಲಾವಣೆ: ಸ್ಪೀಡ್ ಟ್ವಿನ್ 1200 ಮಾದರಿಯ ಇನ್ಸ್ಟ್ರುಮೆಂಟೆಷನ್ ಅನ್ನು ಬದಲಾಯಿಸಲಾಗಿದೆ. ಟ್ರೈಡೆಂಟ್ 660 ರ ಅ್ವಿನ್ ಡಿಜಿ-ಅನಲಾಗ್ ಡಯಲ್‌ಗಳನ್ನು LCD/TFT ಘಟಕದೊಂದಿಗೆ ಬದಲಾಯಿಸಲಾಗಿದೆ. ಕಂಪನಿಯು ಈ ಯುನಿಟ್ ಅನ್ನು ಇತ್ತೀಚೆಗೆ ಬಿಡುಗಡೆಯಾದ ಸ್ಪೀಡ್ ಟ್ವಿನ್ 900 ಸೇರಿದಂತೆ ಹಲವಾರು ಮಾದರಿಗಳಲ್ಲಿ ಬಳಸುತ್ತದೆ. ಈ ಎರಡೂ ಸ್ಪೀಡ್ ಟ್ವಿನ್ ಮಾದರಿಗಳಲ್ಲಿ ಸ್ವಿಚ್‌ಗೇರ್ ಒಂದೇ ಆಗಿರುತ್ತದೆ. ಇವುಗಳು USB-C ಚಾರ್ಜಿಂಗ್ ಪೋರ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಬರುತ್ತದೆ.
ಇದರ ಮೂಲ ಸ್ಪೀಡ್ ಟ್ವಿನ್ 1200 ಮಾದರಿಯು ಹೈ-ಸ್ಪೆಕ್ RS ಗಿಂತ ಕಡಿಮೆ ಬಾರ್ಸ್, ಹೆಚ್ಚು ರಿಯರ್ಸೆಟ್ ಫುಟ್‌ಪೆಗ್ ಜೊತೆ ಆರಾಮದಾಯಕ ಎರ್ಗೊನಾಮಿಕ್ಸ್ ಹೊಂದಿದೆ, RS ಎಂಬುದು ಎರಡರಲ್ಲಿ ಹೆಚ್ಚಿನ ಸ್ಪೆಕ್ ರೂಪಾಂತರವಾಗಿದ್ದು, ಸಂಪೂರ್ಣವಾಗಿ ಅಡ್ಜಸ್ಟಬಲ್ ಮಾರ್ಜೋಚಿ ಫೋರ್ಕ್‌ಗಳು, ಓಹ್ಲಿನ್ಸ್ ಶಾಕ್ ಅಬ್ಸಾರ್ಬರ್‌ಗಳು ಮತ್ತು 320mm ಡಿಸ್ಕ್‌ಗಳನ್ನು ಹೊಂದಿರುವ ಬ್ರೆಂಬೊ ಸ್ಟೈಲೆಮಾ ಕ್ಯಾಲಿಪರ್‌ಗಳು ಇವೆ.
ಟ್ರಯಂಫ್ ಸ್ಪೀಡ್ ಟ್ವಿನ್ 1200 ಕಲರ್ ಆಪ್ಷನ್: ಬಣ್ಣ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಸ್ಟ್ಯಾಂಡರ್ಡ್ ಸ್ಪೀಡ್ ಟ್ವಿನ್ 1200 ವೈಟ್, ರೆಡ್ ಮತ್ತು ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಆದರೂ RS ರೂಪಾಂತರವು ಬ್ಲ್ಯಾಕ್ ಮತ್ತು ಆರೆಂಜ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯ ಇತರ ವೈಶಿಷ್ಟ್ಯಗಳು ಈ ಎರಡೂ ಮಾದರಿಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಮೊದಲ ಬಾರಿಗೆ ಆನ್-ಬಾರ್ಸ್ ಮತ್ತು ಕೆಫೆ ರೇಸರ್ ನೋಟಕ್ಕಾಗಿ ಸೋಲೋ ಸೀಟ್ ಸಹ ಇದೆ.
ಓದಿ: ಚೀನಾದ DeepSeek ತರಬೇತಿಗೆ Chat GPT ಡೇಟಾ ಕಳವು ಶಂಕೆ: ತನಿಖೆಗೆ ಮುಂದಾದ OpenAI