thumbnail

By

Published : Jan 12, 2023, 8:18 PM IST

Updated : Feb 3, 2023, 8:38 PM IST

ETV Bharat / Videos

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಗಮನ ಸೆಳೆದ ಐ ಲವ್​ ಮೋದಿ ಗಾಳಿಪಟ

ಸೋಮನಾಥ(ಗುಜರಾತ್​​) :ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2023 ಗುಜರಾತ್​ನ ಸೋಮನಾಥ್​​ನಲ್ಲಿ ನಡೆಯಿತು. ಗಾಳಿಪಟ ಉತ್ಸವದಲ್ಲಿ  ಸುಮಾರು 15 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಗಾಳಿಪಟ ಉತ್ಸವದಲ್ಲಿ ಒಡಿಶಾದ ವ್ಯಕ್ತಿಯೊಬ್ಬರು ಐ ಲವ್​  ಮೋದಿ ಹೆಸರಿನ ಗಾಳಿಪಟವನ್ನು ತಯಾರಿಸಿ ಆಕಾಶದಲ್ಲಿ ಹಾರಿಸಿದರು. ಇದು ಎಲ್ಲರ ಗಮನ ಸೆಳೆಯಿತು. ಈ ಹಿಂದೆ ಇವರು ಐ ಲವ್ ಗುಜರಾತ್ ಮತ್ತು ಜೈ ದ್ವಾರಕಾಧೀಶ್ ಎಂಬ ಗಾಳಿಪಟಗಳನ್ನು ಹಾರಿಸಿದ್ದರು. ಇನ್ನು ಮೋದಿ ಅವರಿಂದ ಪ್ರಭಾವಿತನಾಗಿ ಈ ಗಾಳಿಪಟವನ್ನು ತಯಾರಿಸಿದ್ದೇನೆ. ಇದನ್ನು ತಯಾರಿಸಲು ಸುಮಾರು ಎರಡು  ತಿಂಗಳು  ಶ್ರಮಪಟ್ಟಿದ್ದೇನೆ. ಇಲ್ಲಿನ ಗಾಳಿಪಟ ಉತ್ಸವ ಬಗ್ಗೆ  ತಿಳಿದು ಈ ಗಾಳಿಪಟವನ್ನು ತಯಾರಿಸಿದ್ದೇನೆ. ಇದರ ತಯಾರಿಕೆಗೆ  ಜಪಾನ್, ಚೀನಾ ಸೇರಿದಂತೆ ಇತರ ದೇಶಗಳ ವಸ್ತುಗಳನ್ನು ಬಳಸಿದ್ದೇನೆ  ಎಂದು ಮೋದಿ ಅಭಿಮಾನಿ  ಹೇಳಿದ್ದಾನೆ. ಈ ಗಾಳಿಪಟ  ಜನರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಗಾಳಿಪಟ ಉತ್ಸವದಲ್ಲಿ ವಿವಿಧ ದೇಶಗಳ ಗಾಳಿಪಟಗಳ ಪ್ರದರ್ಶನ  ನಡೆಯಿತು.
ಇದನ್ನು ಓದಿ: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ: ಯುವ ಶಕ್ತಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ

 

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.