ಮಹಾಕಾಳೇಶ್ವರನ ಆಶೀರ್ವಾದ ಪಡೆದ ಕ್ರಿಕೆಟರ್​ ಅಕ್ಷರ್ ಪಟೇಲ್​​ ಮತ್ತು ಮೇಹಾ ಜೋಡಿ

By

Published : Feb 27, 2023, 10:58 AM IST

thumbnail

ಉಜ್ಜಯಿನಿ (ಮಧ್ಯ ಪ್ರದೇಶ): ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಭಾರತ ತಂಡದ ಆಲ್​ರೌಂಡರ್​ ಅಕ್ಷರ್​ ಪಟೇಲ್​ ಪತ್ನಿಯೊಂದಿಗೆ ಮೊದಲ ಬಾರಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡರು. ಮೂರನೇ ಟೆಸ್ಟ್​ ನಡುವೆ 9 ದಿನ ಅಂತರ ಇರುವ ಹಿನ್ನೆಲೆಯಲ್ಲಿ ಪತ್ನಿಯ ಜೊತೆಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.  

ಸೋಮವಾರ ಬೆಳಗಿನ ಜಾವ 03:00 ಗಂಟೆಗೆ ದೇವಾಸ್ಥಾನದ ವಿಶೇಷ ಪೂಜಾ ಸಂದರ್ಭವಾದ ಭಸ್ಮಾರತಿಯ ವೇಳೆ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ. ಆರತಿ ನಂತರ ದೇವಾಲಯದ ಒಳಗೆ ತೆರಳಿ ಅಭಿಷೇಕ ಮಾಡಿ ಬಾಬಾ ಅವರ ಆಶೀರ್ವಾದ ಪಡೆದಿದ್ದಾರೆ. ಅಕ್ಷರ್​ ಪಟೇಲ್​ ಮತ್ತು ಮೇಹಾ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇತ್ತೀಚೆಗೆ ಮದುವೆಯಾದ ಸ್ಟಾರ್​ ಜೋಡಿ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಕೂಡಾ ಭಾನುವಾರ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.  

ಇದನ್ನೂ ಓದಿ: ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್​ ಪರ ಅತೀ ಹೆಚ್ಚು ಟೆಸ್ಟ್​ ಸ್ಕೋರರ್​

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.