ಗ್ರೀಸ್ನಲ್ಲಿ ನೆಲೆಸಿರುವ ಭಾರತೀಯರಿಂದ ಮೋದಿಗೆ ಅದ್ದೂರಿ ಸ್ವಾಗತ.. ಮೊಳಗಿದ 'ಭಾರತ್ ಮಾತಾ ಕಿ ಜೈ,' 'ಮೋದಿ, ಮೋದಿ' ಘೋಷಣೆ - ETV Bharath Kannada news
🎬 Watch Now: Feature Video
Published : Aug 25, 2023, 12:22 PM IST
ಅಥೆನ್ಸ್ (ಗ್ರೀಸ್): PM Modi in Athens: 'ಭಾರತ್ ಮಾತಾ ಕಿ ಜೈ,' 'ಮೋದಿ, ಮೋದಿ' ಘೋಷಣೆಯ ಮೂಲಕ ಗ್ರೀಸ್ನಲ್ಲಿ ನೆಲೆಸಿರುವ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ನೀಡಿದರು. ಗ್ರ್ಯಾಂಡೆ ಬ್ರೆಟಾಗ್ನೆ ಹೋಟೆಲ್‌ಗೆ ಆಗಮಿಸಿದ ಮೋದಿ ಅಲ್ಲಿ ನೆರೆದಿದ್ದ ಭಾರತೀಯ ವಲಸಿಗರನ್ನು ಭೇಟಿ ಮಾಡಿದರು. 40 ವರ್ಷದ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಗ್ರೀಸ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.
ಗ್ರೀಸ್‌ನ ಅಥೆನ್ಸ್‌ಗೆ ಪ್ರಧಾನಿ ಮೋದಿ ಆಗಮನದ ಬಗ್ಗೆ ಭಾರತೀಯ ಸಮುದಾಯವು ಸಂತೋಷ ವ್ಯಕ್ತಪಡಿಸಿತು. ಭಾರತೀಯ ವಲಸಿಗರ ಸದಸ್ಯರೊಬ್ಬರು, "ಪ್ರಧಾನಿ ಮೋದಿ ಬಂದಿರುವುದು ನನಗೆ ತುಂಬಾ ಖುಷಿ ತಂದಿದೆ. 40 ವರ್ಷಗಳ ನಂತರ ಪ್ರಧಾನಿ ಬಂದರು. 1983ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಗ್ರೀಸ್‌ಗೆ ಆಗಮಿಸಿದ್ದರು. ಕಳೆದ 9 ವರ್ಷಗಳಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಮತ್ತು ಅವರು ವಿಶ್ವದಲ್ಲಿ ಭಾರತಕ್ಕೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ. ಪ್ರಧಾನಿ ಮೋದಿ ಬಂದಿದ್ದಕ್ಕಾಗಿ ನನಗೆ ತುಂಬಾ ಹೆಮ್ಮೆ ಇದೆ" ಎಂದು ಖುಷಿ ಹಂಚಿಕೊಂಡಿದ್ದಾರೆ.
ಈ ಭೇಟಿ ಸಮಯದಲ್ಲಿ ಮೊದಿ ಗ್ರೀಸ್ನೊಂದಿ ಕೆಲ ವ್ಯಾಪಾರಿ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ. ಅಲ್ಲದೇ ಅಲ್ಲಿನ ಪ್ರಧಾನಿಯ ಜೊತೆಗೆ ಭೋಜನದಲ್ಲಿ ಭಾಗಿ ಆಗಲಿದ್ದಾರೆ. ನಂತರ ಅಲ್ಲಿ ನೆಲೆಸಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಇದಾದ ತಕ್ಷಣವೇ ಗ್ರೀಸ್‌ನ ಒಂದು ದಿನದ ಪ್ರವಾಸ ಮುಗಿಸಿ ಪ್ರಧಾನಿ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ (ಎಎನ್ಐ)
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ ಮುಗಿಸಿ ಅಥೆನ್ಸ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ.. ಭವ್ಯ ಸ್ವಾಗತ